ಎಸ್.ಜೆ.ಸೋಮಶೇಖರ್ ಅವರಿಗೆ ಬೂತ್ ಲೆವಲ್ ಏಜೆಂಟ್-೨ ಪಟ್ಟಿಯನ್ನು ತೆನ್ನಿರ ಮೈನಾ ಅವರು ಮಂಗಳವಾರ ಸಲ್ಲಿಸಿದರು. 
ಕೊಡಗು

ಡಿಸಿಗೆ ಬಿ.ಎಲ್.ಎ-೨ ಪಟ್ಟಿ ಸಲ್ಲಿಕೆ

ಪ್ರಮುಖ ಮುಖ್ಯಾಂಶಗಳು

  • ಡಿಸಿಗೆ ಬಿ.ಎಲ್.ಎ-೨ ಪಟ್ಟಿ ಸಲ್ಲಿಕೆ
ಮಡಿಕೇರಿ: ಜಿಲ್ಲಾ ಚುನಾವಣಾಧಿಕಾರಿ ಮತ್ತು ಕೊಡಗು ಜಿಲ್ಲಾಧಿಕಾರಿಗಳಾದ ಎಸ್.ಜೆ.ಸೋಮಶೇಖರ್ ಅವರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಪರಿಷ್ಕರಿಸಿ ಅಂತಿಮಗೊಳಿಸಿರುವ ಬಿ.ಎಲ್.ಎ-೨(ಬೂತ್ ಲೆವಲ್ ಏಜೆಂಟ್-೨) ಪಟ್ಟಿಯನ್ನು ಮಂಗಳವಾರ ಸಲ್ಲಿಸಲಾಯಿತು.
ಕೊಡಗು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರರು ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾರವರು ೨೦೮ ಮಡಿಕೇರಿ ವಿಧಾನ ಸಭಾ ಕ್ಷೇತ್ರ ಹಾಗೂ ೨೦೯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಸಂಭಂದಿಸಿದಂತೆ ಒಟ್ಟು ೫೫೨ ಮತಗಟ್ಟೆಗಳ ಕಾಂಗ್ರೆಸ್ ಪಕ್ಷದ ಬಿ.ಎಲ್.ಎ ೨ ರವರ ವಿವರಗಳನ್ನು ಒಳಗೊಂಡು ಸಿದ್ದಪಡಿಸಿದ ಅಧಿಕೃತ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಲ್ಲಿಸಿದರು.
ಕೇಂದ್ರ ಚುನಾವಣಾ ಆಯೋಗ ಪಾರದರ್ಶಕವಾಗಿ ಮತದಾರರ ಪಟ್ಟಿ ರಚಿಸಲು ಅನುಕೂಲವಾಗುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಬಿ.ಎಲ್.ಎ ಯ ಬಳಕೆಗೆ ನಿರ್ದೇಶನವನ್ನು ನೀಡಿದ್ದು ಎಸ್.ಐ.ಆರ್ ಪ್ರಕೃಯೆಗಳಲ್ಲಿ ಸರ್ಕಾರಿ ಬಿ.ಎಲ್.ಒ ಗಳ ಜೊತೆಗೆ ರಾಜಕೀಯ ಪಕ್ಷಗಳ ಬಿ.ಎಲ್.ಎ ಗಳ ಜೊತೆ ಸಮನ್ವಯತೆಯಿಂದ ಬಳಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು. ಕೊಡಗು ಜಿಲ್ಲೆಯಲ್ಲಿ ಶೇ.೧೦೦ ರಷ್ಟು ಸಮರ್ಪಕವಾಗಿ ಎಸ್.ಐ.ಆರ್ ಪರಿಷ್ಕರಣೆಯನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.