ಬಾಳೆಲೆ ವಿಜಯಲಕ್ಷಿö್ಮÃ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಕಾಡೇಮಾಡ ಉದಯ ಉತ್ತಪ್ಪ, ಜ್ಯೋತಿ, ಡಾ. ಜೆ. ಸೋಮಣ್ಣ, ಅಳಮೇಂಗಡ ಬೋಸ್ ಮಂದಣ್ಣ ಮತ್ತಿತರರು ಇದ್ದರು.
ವಿದ್ಯಾರ್ಥಿಗಳು ಬಾಲ್ಯದಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿ ಭಾರತವನ್ನು ವಿಶ್ವದ ಶ್ರೇಷ್ಠ ರಾಷ್ಟ್ರವನ್ನಾಗಿ ರೂಪಿಸಲು ಸಾಧ್ಯ ಎಂದು ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿಯ ಮಾಜಿ ಅಧ್ಯಕ್ಷ ಕಾಡೇಮಾಡ ಉದಯ ಉತ್ತಪ್ಪ ಹೇಳಿದರು.
ಬಾಳೆಲೆ ವಿಜಯಲಕ್ಷಿö್ಮÃ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ನಾಯಕತ್ವ ಗುಣ ರೂಪಿಸಿಕೊಳ್ಳಲು ಶಾಲಾ ಹಂತದಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲರಾದ ಜ್ಯೋತಿ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವ್ಯಸನ ಹಾಗೂ ಮೊಬೈಲ್ ಚಟದಿಂದ ದೂರವಿದ್ದು, ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಭವಿಷ್ಯದ ಸ್ಪಷ್ಟ ಗುರಿಯಿಟ್ಟುಕೊಂಡು ಸಾಗಬೇಕು ಎಂದರು. ಮತ್ತೋರ್ವ ಅತಿಥಿ ನಿವೃತ್ತ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಜ್ಞಾನಾರ್ಜನೆಗಾಗಿ ಹಾಕುವ ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ಶಾಲೆಗೆ ಹಾಜರಾಗಿ ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು. ಸರ್ಕಾರ ಹಾಗೂ ದಾನಿಗಳಿಂದ ಲಭ್ಯವಿರುವ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ನಾಡಿನ ಉತ್ತಮ ಆಸ್ತಿಯಾಗಿ ಬೆಳೆಯಬೇಕು ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ವಹಿಸುವ ಶ್ರಮಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳು ಸದಾ ಸ್ಪಂದಿಸಿ ಕೈಜೋಡಿಸಬೇಕು ಎಂದು ಹೇಳಿದರು.
ಕಾಲೇಜು ವಿಭಾಗದ ನಾಯಕ ಜೆ.ಎಲ್. ಸುಬ್ರಮಣಿ, ಕಾರ್ಯದರ್ಶಿ ಟಿ.ಎಂ. ಲಕ್ಷಿö್ಮÃ, ಪ್ರೌಢಶಾಲಾ ವಿಭಾಗದ ನಾಯಕ ಲೋಹಿತ್, ಉಪನಾಯಕ ಅರುಣ್ ಕುಮಾರ್, ಕಾರ್ಯದರ್ಶಿ ಹರ್ಷಿತಾ, ಉಪಕಾರ್ಯದರ್ಶಿ ಮುತ್ತಮ್ಮ ಅವರಿಗೆ ಪ್ರಾಂಶುಪಾಲರಾದ ಪ್ರತಿಭಾ ಉತ್ತಪ್ಪ, ಶಿಕ್ಷಕ ಜಯಣ್ಣ ಇದೇ ಸಂದರ್ಭ ಪ್ರತಿಜ್ಞಾ ವಿಧಿ ಬೋಧಿಸಿದರು.
ಸ್ವಯಂ ನಿವೃತ್ತಿ ಹೊಂದಿದ ಕಾಲೇಜಿನ ಪ್ರಾಂಶುಪಾಲ ಎನ್.ಕೆ. ಪ್ರಭು ಅವರನ್ನು ಸಂಸ್ಥೆಯ ವತಿಯಿಂದ ಇದೇ ವೇಳೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಕಾಯಮಾಡ ರಾಜ, ಕಿರುದಂಡ ದೇವಯ್ಯ, ಪೊಡಮಾಡ ಮೋಹನ್, ಅಲೆಮಾಡ ಕರುಂಬಯ್ಯ, ಕಾಟಿಮಾಡ ಶರೀನ್ ಮತ್ತಣ್ಣ, ಮೇಚಂಡ ಪೆಮ್ಮಯ್ಯ, ಅಡ್ಡೇಂಗಡ ಅರುಣ್, ಪೋಡಮಾಡ ಸುಕೇಶ್ ಭೀಮಯ್ಯ, ಪೊಡಮಾಡ ನವೀನ್ ನಾಣಯ್ಯ, ಅದೇಂಗಡ ವಿನು ಉತ್ತಪ್ಪ, ಅದೇಂಗಡ ಶೇಖರ್, ಅಳಮೇಂಗಡ ಸುರೇಶ್ ಸುಬ್ಬಯ್ಯ, ವಿದ್ಯಾ ಪ್ರಭು, ಮುಖ್ಯ ಶಿಕ್ಷಕ ಚಂದ್ರಶೇಖರ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭ ಇದ್ದರು.