ಹೆಗ್ಗಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಾವು ಕಡಿತ ಮತ್ತು ಅರಣ್ಯದಲ್ಲಿ ಅಕ್ರಮ ಬೇಟೆ ಕುರಿತ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು. ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಗ್ರಾಮೀಣ ಅರಣ್ಯ ಕೃಷಿ ಕಾರ್ಯಾನುಭವ ಶಿಬಿರದ ಹಿರಿಯ ವಿದ್ಯಾರ್ಥಿಗಳಾದ ಆರ್. ಹೇಮಂತ್, ಡಿ.ಪ್ರವೀಣ, ಓಂಕಾರ್, ಬಿ.ನಾಗವೇಣಿ ಇತರರು ಹಾಜರಿದ್ದರು.
- ಶ್ರೀ ಹೆಗ್ಗಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಾಗೃತಿ ಶಿಬಿರ
- ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಿಂದ ಆಯೋಜನೆ
ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ವತಿಯಿಂದ ಹೆಗ್ಗಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಹಾವು ಕಡಿತ ಮತ್ತು ಅರಣ್ಯದಲ್ಲಿ ಅಕ್ರಮವಾಗಿ ನಡೆಯುವ ಬೇಟೆ ಚಟುವಟಿಕೆಗಳ ಕುರಿತು ಜಾಗೃತಿ ಶಿಬಿರ ಆಯೋಜಿಸಲಾಗಿತ್ತು.
ಯಾವುದೇ ಹಾವು ಕಡಿದ ಸಂದರ್ಭ ಬಾಯಿಯಿಂದ ವಿಷ ತೆಗೆಯುವ ಪ್ರಯತ್ನ ಮಾಡಬಾರದು.
ಕಚ್ಚಿದ ಹಾವು ವಿಷಪೂರಿತವೋ, ವಿಷ ರಹಿತವೋ ಎಂಬುದನ್ನು ತಿಳಿಯುವ ಪ್ರಯತ್ನ ಮಾಡಬೇಕು. ತಕ್ಷಣ ವೈದ್ಯಕೀಯ ನೆರವು ಪಡೆಯಲು ಮುಂದಾಗಬೇಕು ಎಂದು ಅರಣ್ಯ ವಿದ್ಯಾಲಯದ ಗ್ರಾಮೀಣ ಅರಣ್ಯ ಕೃಷಿ ಕಾರ್ಯಾನುಭವ ಶಿಬಿರದ ಹಿರಿಯ ವಿದ್ಯಾರ್ಥಿಗಳು ಮಾಹಿತಿ ನೀಡಿದರು.
ವನ್ಯಜೀವಿಗಳ ಸಂರಕ್ಷಣೆ, ಅರಣ್ಯದ ಮಹತ್ವ ಮತ್ತು ವನ್ಯಜೀವಿಗಳನ್ನು ಬೇಟೆಯಾಡುವುದರಿಂದ ಪರಿಸರ ಸಮತೋಲನದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ವಿವರಿಸಲಾಯಿತು. ಅಕ್ರಮ ಬೇಟೆಯನ್ನು ತಡೆಯುವಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಕಾಳಜಿ ತೋರಬೇಕು ಎಂದರು.
ಅರಣ್ಯ ವಿದ್ಯಾಲಯದ ವಿದ್ಯಾರ್ಥಿಗಳಾದ ಆರ್. ಹೇಮಂತ್, ಡಿ.ಪ್ರವೀಣ, ಓಂಕಾರ್, ಬಿ.ನಾಗವೇಣಿ ಇತರರು ಹಾಜರಿದ್ದರು.