ಶ್ರೀಮಂಗಲ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ವಿಶ್ವನಾಥ್ ಮಾತನಾಡಿದರು. ಅಯ್ಯಪ್ಪ, ಪದ್ಮಾ, ಸೋಮಯ್ಯ ಇತರರಿದ್ದರು. 
ಕೊಡಗು

ವಿದ್ಯಾರ್ಥಿ ಸಂಘದ ಚಟುವಟಿಕೆ ಅಗತ್ಯ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಉಪನ್ಯಾಸಕ ಚೊಟ್ಟೆಯಂಡಮಾಡ ವಿಶ್ವನಾಥ್ ಅಭಿಮತ
ಗೋಣಿಕೊಪ್ಪ: ವಿದ್ಯಾರ್ಥಿಗಳು ಪ್ರತಿಭೆ ಅನಾವರಣ ಮಾಡಲು ವಿದ್ಯಾರ್ಥಿ ಸಂಘದ ಚಟುವಟಿಕೆ ಅಗತ್ಯವಾಗಿದೆ ಎಂದು ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಚೊಟ್ಟೆಯಂಡಮಾಡ ವಿಶ್ವನಾಥ್ ಹೇಳಿದರು.
ಶ್ರೀಮಂಗಲ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯದರ್ಶಿ ಕಾಳಿಮಾಡ ಪದ್ಮ ಮಾತನಾಡಿ, ಸಗಣಿ ಜತೆ ಸರಸವಾಡುವುದಕ್ಕಿಂತ ಗಂಧದ ಜತೆ ಗುದ್ದಾಡುವುದೇ ಲೇಸು ಎಂಬ ನಾಲ್ನುಡಿ ಪ್ರಸ್ತಾಪಿಸುತ್ತ ವಿದ್ಯಾರ್ಥಿ ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕೆಂದು ಉದಾಹರಣೆ ಸಹಿತ ವಿವರಿಸಿದರು.
ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಬೋಡಂಗಡ ಅಯ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತನ್ನು ಪಾಲಿಸಬೇಕು. ಉತ್ತಮ ಶಿಸ್ತು, ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಹಕಾರವಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಮುಲ್ಲೇಂಗಡ ಸೋಮಯ್ಯ, ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.
***ನಾಗೇಶ್, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಅಕ್ಕಮ್ಮ, ಆಡಳಿತ ಮಂಡಳಿ ಖಜಾಂಚಿ ವಿನಯ್, ನಿರ್ದೇಶಕ ತಡಿಯಾಂಗಡ ಜಯರಾಜ್, ಚೆಟ್ಟಂಗಡ ಕಂಬ ಕಾರ್ಯಪ್ಪ, ದೇಕಮಾಡ ನವೀನ್, ಅಜ್ಜಮಾಡ ಸಾವಿತ್ರಿ, ಪ್ರೌಢಶಾಲಾ ಮುಖ್ಯಶಿಕ್ಷಕಿ ರತ್ನಮ್ಮ.ಎಚ್.ಬಿ, ಕಾಲೇಜು ವಿಭಾಗದ ಸಂಘದ ಉಪಾಧ್ಯಕ್ಷೆ ಸುಜಾತಾ ಹಾಗೂ ಸಂಸ್ಥೆಯ ಉಪನ್ಯಾಷಕರು, ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.