ಬೆಂಗಳೂರು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣದಲ್ಲಿ ಆಯೋಜಿಸಿದ್ದ ಆರನೇ ವರ್ಷದ ಕ್‌ಗ್ಗಟ್‌ನಾಡ್ ಕೊಡವ ಸಂಘದ ಸಮ್ಮಿಲನದ ಕಾರ್ಯಕ್ರಮದಲ್ಲಿ ಸಮುದಾಯದವರು ಭಾಗವಹಿಸಿದ್ದರು. 
ಕೊಡಗು

ಕೊಡವ ಸಾಹಿತ್ಯ ಸಂಸ್ಕೃತಿ ಉಳಿವಿಗೆ ಶ್ರಮಿಸಿ

ನಾಪೋಕ್ಲು: ಸಮುದಾಯದ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಹಾಗೂ ಆಚರಣೆಗಳ ವಿಷಯವನ್ನು ಮನದಟ್ಟು ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಇಂತಹ ಸಮ್ಮಿಲನ ಕೂಟಗಳು ಹಾಗೂ ವಿಚಾರ ವಿನಿಮಯ ಅತ್ಯಂತ ಸಹಕಾರಿಯಾಗಲಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು.
ಬೆಂಗಳೂರು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣದಲ್ಲಿ ಆಯೋಜಿಸಿದ್ದ ಆರನೇ ವರ್ಷದ ಕ್‌ಗ್ಗಟ್‌ನಾಡ್ ಕೊಡವ ಸಂಘ ಬೆಂಗಳೂರು (ಒತ್ತೋರ್ಮೆ ಕೂಟ) ಸಮ್ಮಿಲನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್‌ಗ್ಗಟ್‌ನಾಡ್ ಕೊಡವ ಸಂಘದ ಏಳಿಗೆಗೆ ಪ್ರತಿಯೊಬ್ಬ ಸದಸ್ಯನು ಶ್ರಮಿಸಬೇಕು. ಕ್‌ಗ್ಗಟ್‌ನಾಡ್ ಕೊಡವ ಸಂಘ ಹಾಗೂ ಅದರ ಸಂಘಟನೆ ಮತ್ತು ಆಚಾರ ವಿಚಾರ ಮತ್ತಷ್ಟು ಬೆಳೆಯಬೇಕೆಂದರೆ ಸಂಘಟನೆಯ ಹಾಗೂ ಸಮಾಜದ ಪ್ರತಿಯೊಬ್ಬರು ತಮ್ಮ ಕೊಡುಗೆಯನ್ನು ನೀಡಲೇಬೇಕು. ಆ ಮೂಲಕ ಕೊಡವ ಸಾಹಿತ್ಯ ಸಂಸ್ಕೃತಿ ಮತ್ತು ಆಚರಣೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಲು ಶ್ರಮಿಸಬೇಕು ಎಂದು ಹೇಳಿದರು..
ಕಾರ್ಯಕ್ರಮದಲ್ಲಿ ಐಎಆರ್‌ಎಸ್ ಉಪ ನಿರ್ದೇಶಕ ಹಾಗೂ ಇಡಿ ಅಧಿಕಾರಿ ಕೊಟ್ಟಂಗಡ ಡಾ ಪೆಮ್ಮಯ್ಯ, ಕಸ್ಟಮ್ ಹಾಗೂ ಜಿಎಸ್ ಟಿ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ಚೊಟ್ಟೆಯಂಡಮಾಡ ಸತೀಶ್, ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಕ್‌ಗ್ಗಟ್‌ನಾಡ್ ಕೊಡವ ಸಂಘದ ಅಧ್ಯಕ್ಷ ಮಂಡಚಂಡ ಸುರೇಶ್ ಪೂಣಚ್ಚ, ಉಪಾಧ್ಯಕ್ಷ ತಿತೀರ ರೋಷನ್ ಅಪ್ಪಚ್ಚು, ಗೌರವ ಕಾರ್ಯದರ್ಶಿ ಮಲ್ಲೆಂಗಡ ಮಧು ಕುಶಾಲಪ್ಪ, ಜಂಟಿ ಕಾರ್ಯದರ್ಶಿ ಗುಡ್ಡಮಾಡ ಸದಾ ತಮ್ಮಯ್ಯ, ಖಜಾಂಚಿ ಮಾಚಿಮಾಡ ಕುಶಾಲಪ್ಪ, ಜಂಟಿ ಖಜಾಂಚಿ ಶರತ್ ಕುಶಾಲಪ್ಪ, ಸಂಘದ ಸದಸ್ಯರು ಇದ್ದರು.