ಕೊಡಗಿನ ತಡಿಯಂಡ ಮೋಳ್ ಬೆಟ್ಟದ ಚಾರಣದ ಹಾದಿಯಲ್ಲಿ ತೆರಳುತ್ತಿರುವ ಚಾರಣಿಗರು 
ಕೊಡಗು

ಚಾರಣಿಗರ ಸುರಕ್ಷತೆಗೆ ಬೇಕಿದೆ ಕಠಿಣ ನಿಯಮ

ಕೊಡಗು ಪಶ್ಚಿಮ ಘಟ್ಟಗಳ ಮಡಿಲಲ್ಲಿ ಇರುವುದರಿಂದ ಚಾರಣಿಗರ ಪಾಲಿನ ಸ್ವರ್ಗ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯದ ಮಧ್ಯೆ ಸವಾಲಿನ ಬೆಟ್ಟಗಳಲ್ಲಿ ನಡೆದಾಡುವುದು ಚಾರಣಿಗರಿಗೆ ಬಹಳ ಇಷ್ಟದ ವಿಷಯ. ಜಿಲ್ಲೆಯಲ್ಲಿ ಅತ್ಯಂತ ಎತ್ತರದ ಶಿಖರ ಎಂಬ ಖ್ಯಾತಿಯ ತಡಿಯಂಡ ಮೋಳ್ ಸುಲಭದಿಂದ ಮಧ್ಯಮ ಹಂತದ ಚಾರಣಕ್ಕೆ ಸೂಕ್ತವಾಗಿದೆ. ಶಿಖರದ ಮೇಲಿನಿಂದ ಕಾಣುವ ಮೋಡಗಳ ನೋಟ ಅದ್ಭುತ. ಅತ್ಯಂತ ಕಠಿಣವಾದ ಆದರೆ ಅಷ್ಟೇ ರೋಮಾಂಚಕವಾದ ಚಾರಣಕ್ಕೆ ಪುಷ್ಪಗಿರಿ ಬೆಟ್ಟ ಹೆಸರಾಗಿದೆ. ದಟ್ಟ ಅರಣ್ಯ ಮತ್ತು ಕಡಿದಾದ ದಾರಿಗಳನ್ನು ಇದು ಒಳಗೊಂಡಿರುವುದರಿAದ ಚಾರಣಿಗರು ಹೆಚ್ಚು ಇಷ್ಟಪಡುತ್ತಾರೆ. ಇರ್ಪು ಜಲಪಾತದ ಸಮೀಪವಿರುವ ಬ್ರಹ್ಮಗಿರಿ ಬೆಟ್ಟದ ಹಾದಿ ವನ್ಯಜೀವಿ ಪ್ರಿಯರಿಗೆ ಮತ್ತು ದಟ್ಟ ಕಾಡಿನ ಅನುಭವ ಬಯಸುವವರಿಗೆ ಸೂಕ್ತವಾಗಿದೆ. ಮಡಿಕೇರಿ ಸನಿಹದ ನಿಶಾನಿ ಮೊಟ್ಟೆ ಬೆಟ್ಟವೂ ಚಾರಣಿಗರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಕೊಡಗಿನಲ್ಲಿ ಚಾರಣ ರೋಮಾಂಚಕವಾಗಿರುವುದರ ಜತೆಗೆ ಸಾಕಷ್ಟು ಅಪಾಯಗಳಿಗೂ ಕಾರಣವಾಗುವ ಸಾಧ್ಯತೆಯೂ ಇರುತ್ತದೆ. ಕೊಡಗಿನ ಕಾಡುಗಳಲ್ಲಿ ಆನೆಗಳ ಸಂಚಾರ ಹೆಚ್ಚಾಗಿರುತ್ತದೆ. ಚಾರಣದ ಹಾದಿಯಲ್ಲಿ ಆನೆಗಳು ಅಥವಾ ಇತರ ಕಾಡುಪ್ರಾಣಿಗಳು ಎದುರಾಗಬಹುದು. ಮಳೆಗಾಲದಲ್ಲಿ ಚಾರಣ ಮಾಡುವಾಗ ಜಿಗಣೆಗಳ ಹಾವಳಿ ದೊಡ್ಡ ಸಮಸ್ಯೆಯಾಗುತ್ತವೆ. ದಟ್ಟ ಮಂಜು ಕವಿದಾಗ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಅಲ್ಲದೆ, ಭಾರೀ ಮಳೆಯ ಸಮಯದಲ್ಲಿ ಹಾದಿಗಳು ಜಾರುವುದರಿಂದಲೂ ಅಪಾಯ ಆಗಬಹುದು. ಬೆಟ್ಟದ ಮೇಲ್ಭಾಗದಲ್ಲಿ ಮೊಬೈಲ್ ಸಿಗ್ನಲ್ ಸಿಗುವುದು ಅಪರೂಪ.
"

ಚಾರಣದ ಸಂದರ್ಭದಲ್ಲಿ ಕಸದ ನಿರ್ವಹಣೆಯ ಕುರಿತ ಅರಣ್ಯ ಇಲಾಖೆಯ ಕ್ರಮ ಶ್ಲಾಘನೀಯ. ಅದರೊಂದಿಗೆ ಚಾರಣ ಮಾರ್ಗಗಳಲ್ಲಿ ಸ್ಪಷ್ಟ ಸೂಚನಾ ಫಲಕಗಳನ್ನು ಅಳವಡಿಸಬೇಕು. ಚಾರಣಿಗರ ಸೌಲಭ್ಯಕ್ಕಾಗಿ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಒದಗಿಸಬೇಕು. ಅಪಾಯಕಾರಿ ಪ್ರದೇಶಗಳಲ್ಲಿ ಇಲಾಖೆಯ ಸಿಬ್ಬಂದಿ ನಿಯೋಜಿಸಬೇಕು.

"

ಸೋಲೋ ಟ್ರಕ್ಕಿಂಗ್‌ಗೆ ಅವಕಾಶ ನೀಡಬಾರದು. ಪ್ರತಿಯೊಬ್ಬ ಚಾರಣಿಗರಿಗೆ ಟ್ರ‍್ಯಾಕಿಂಗ್ ಉಪಕರಣ ಅಳವಡಿಸಬೇಕು ಹಾಗೂ ಅದರ ವೆಚ್ಚವನ್ನು ಅವರಿಂದಲೇ ಭರಿಸಬೇಕು. ಪ್ರತಿಯೊಂದು ಚಾರಣ ತಂಡದೊAದಿಗೆ ಸ್ಥಳೀಯ ಗೈಡ್ ಕಳುಹಿಸಬೇಕು. ಅರಣ್ಯ ಇಲಾಖೆ ನಿಯಮಗಳನ್ನು ಬಿಗಿಗೊಳಿಸಬೇಕು.

"

ತಡಿಯಂಡಮೋಳ್ ಬೆಟ್ಟವನ್ನು 16ಬಾರಿ ಚಾರಣ ಮಾಡಿದ್ದೇನೆ. ಕೊಡಗಿನಲ್ಲಿ ಅತಿ ಹೆಚ್ಚು ಜನ ಚಾರಣಕ್ಕೆ ಹೋಗುವ ಬೆಟ್ಟ ಅದು. ದಾರಿ ತಪ್ಪುವ ಸಂದರ್ಭವೇ ಇಲ್ಲ. ಚಾರಣ ಹೋಗುವ ಬೆಟ್ಟಗಳಲ್ಲಿ ಅರಣ್ಯ ಇಲಾಖೆಯವರು ದಾರಿಯ ಬಗ್ಗೆ, ದೂರದ ಬಗ್ಗೆ ಮಾಹಿತಿ ಫಲಕ ಹಾಕುವುದು ಒಳ್ಳೆಯದು. ಪುಷ್ಪಗಿರಿಯಲ್ಲಿ ಇದನ್ನು ಮಾಡಿದ್ದಾರೆ.

"

ಸ್ಥಳೀಯ ಮಾಹಿತಿ ಇರುವ ಗೈಡ್‌ಗಳ ಮಾರ್ಗದರ್ಶನದಲ್ಲಿಯೇ ಚಾರಣ ಕೈಗೊಳ್ಳಬೇಕು. ಅಲ್ಲಲ್ಲಿ ನಿಯಮಿತವಾದ ಸಂಖ್ಯೆಯನ್ನು ಒಳಗೊಂಡಿರುವ ಮಾಹಿತಿ ಫಲಕಗಳಿರಬೇಕು. ಕಟ್ಟುನಿಟ್ಟಾಗಿ ಪ್ರವೇಶವಿಲ್ಲ ಎಂಬ ಸ್ಥಳಕ್ಕೆ ಚಾರಣಿಗರು ಹೋಗುವ ಸಾಹಸ ಮಾಡಬಾರದು. ಕೈಯಲ್ಲೊಂದು ನೀಲನಕ್ಷೆ, ಮಾಹಿತಿಯ ಪ್ರತಿ ಇರಬೇಕು. ಇಂತಿಷ್ಟು ಅವಧಿಯಲ್ಲೇ ಹಿಂದಿರುಗಬೇಕೆAಬ ನಿಯಮ ಜಾರಿಯಾಗಬೇಕು.

"

ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ದೇಶಕ್ಕೆ ಮಾದರಿಯಾಗುವಂಥ ಪ್ರಮಾಣಿತ ಮಾನದಂಡ ರೂಪಿಸಬೇಕು. ಇ-ಗಸ್ತು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಕೆ ಮಾಡುವ ಎಂ.ಸ್ಟೆçöÊಪ್ ಮಾದರಿಯ ಆ್ಯಪ್ ರೀತಿಯಲ್ಲೇ ಚಾರಣಿಗರ ಮೊಬೈಲ್‌ನಲ್ಲಿ ಚಾರಣದ ಅವಧಿಯಲ್ಲಿ ತಾತ್ಕಾಲಿಕವಾಗಿ ಆ್ಯಪ್ ಅಳವಡಿಸಿದರೆ ದಾರಿ ತಪ್ಪಿಸಿಕೊಂಡವರ ಶೋಧ ಕಾರ್ಯ ಸುಲಭವಾಗುತ್ತದೆ. ಇಂಥ ಆ್ಯಪ್ ಅಭಿವೃದ್ಧಿಡಿಸಬೇಕು, ಚಾರಣಿಗರಿಗೆ ಗುಂಪು ವಿಮೆ ಮಾಡಿಸಬೇಕು. ಗೈಡ್‌ಗಳಿಗೆ ಹೊಣೆಗಾರಿಕೆ ನಿಗದಿ ಮಾಡಿ ಕಡ್ಡಾಯವಾಗಿ ವೈರ್‌ಲೆಸ್ ಸೆಟ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.