ಮಧ್ಯಪ್ರದೇಶದ ಗೂನಾದಲ್ಲಿ ಇತ್ತೀಚೆಗೆ ನಡೆದ 14 ವರ್ಷದ ಒಳಗಿನವರ ರಾಜ್ಯಮಟ್ಟದ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿ ಕಂಚಿನ ಪದಕ ಪಡೆದ ಅರ್ವತೋಕ್ಕಲು ಸರ್ವದೈವತಾ ಶಾಲೆಯ ಲಿಖಿತ್ ಚಿಣ್ಣಪ್ಪ ಅವರೊಂದಿಗೆ ಮಿನ್ನಂಡ ಜೋಯಪ್ಪ ಹಾಗೂ ಲೇಖಕ್ ಚಂಗಪ್ಪ.
ಪೊನ್ನಂಪೇಟೆ : ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಮಧ್ಯಪ್ರದೇಶದ ಗೂನಾದಲ್ಲಿ ಇತ್ತೀಚೆಗೆ ನಡೆದ 14 ವರ್ಷದ ಒಳಗಿನವರ ರಾಜ್ಯಮಟ್ಟದ ಬಾಕ್ಸಿಂಗ್ ಚಾಂಪಿಯನ್ ಶಿಪ್
ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಕೊಡಗಿನ ಅವಳಿ ಸಹೋದರರಾದ ಮಿನ್ನಂಡ ಲಿಖಿತ್ ಚಿಣ್ಣಪ್ಪ ಹಾಗೂ ಲೇಖಕ್ ಚಂಗಪ್ಪ ಅವರ ಪೈಕಿ ಲಿಖಿತ್ ಚಿಣ್ಣಪ್ಪ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾನೆ. ಈ ಮೂಲಕ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನಡೆದ14 ವರ್ಷ ಒಳಗಿನವರ ಬಾಕ್ಸಿಂಗ್‌ನಲ್ಲಿ ಕರ್ನಾಟಕದ ಪರ ಆಡಿ ಪದಕ ಪಡೆದ ಮೊದಲ ಪಟು ಎಂಬ ಕೀರ್ತಿಗೆ ಲಿಖಿತ್ ಚಿಣ್ಣಪ್ಪ ಭಾಜನನಾಗಿದ್ದಾನೆ. ಅವಳಿ ಸಹೋದರರು ಅರ್ವತೋಕ್ಕಲು ಸರ್ವದೈವತಾ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳು. ಗೋಣಿಕೊಪ್ಪಲು ಕಾವೇರಿ ಕಾಲೇಜು ಹಾಕಿ ತರಬೇತುದಾರ ಮಿನ್ನಂಡ ಜೋಯಪ್ಪ ಹಾಗೂ ಪ್ರೀತ್ ದಂಪತಿ ಪುತ್ರರು.