ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು
- ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅಭಿಮಾನಿಗಳ ಸಂಘ
- ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು
ಸೋಮವಾರಪೇಟೆ: ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ 39ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯ ಹಾಗೂ 41ನೇ ವರ್ಷದ ಸಂಘದ ವಾರ್ಷಿಕೋತ್ಸವ ಜ. 25ರಂದು ಸ್ಥಳೀಯ ಸಾಕಮ್ಮನ ಬಂಗಲೆ ಎದುರಿನ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು ತಿಳಿಸಿದರು.
ಕಳೆದ 39 ವರ್ಷಗಳಿಂದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಹೆಸರಿನಲ್ಲಿ ನಿರಂತರವಾಗಿ ಪಟ್ಟಣದಲ್ಲಿ ಕಬಡ್ಡಿ, ಥ್ರೋಬಾಲ್, ವಾಲಿಬಾಲ್, ಕುಸ್ತಿ, ಕೇರಂ, ಸೈಕಲ್ ಸ್ಪರ್ಧೆ, ರಸ್ತೆ ಓಟ ಸೇರಿದಂತೆ ಹಲವರು ಕ್ರೀಡಾಕೂಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ಕಬಡ್ಡಿ ಪಂದ್ಯ ನಡೆಸಲಾಗುತ್ತಿದೆ. ವಿಜೇತರಿಗೆ ಪ್ರಥಮ ಬಹುಮಾನ 15 ಸಾವಿರ ರೂ. ನಗದು, ದ್ವಿತೀಯ 8 ಸಾವಿರ ಹಾಗೂ ತೃತೀಯ 5 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯುಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಒಟ್ಟು ನಾಲ್ಕು ವಿಭಾಗಗಳಲ್ಲಿ ಪಂದ್ಯ ನಡೆಸಲಾಗುತ್ತಿದ್ದು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, 20 ವಯೋಮಾನದೊಳಗಿನವರಿಗೆ ಹಾಗೂ ಹಿರಿಯರ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.
ಗೋಷ್ಠಿಯಲ್ಲಿ ಕ್ರೀಡಾ ಸಂಚಾಲಕ ಅಜೇಯ, ಗೌರವ ಕಾರ್ಯದರ್ಶಿ ಮಲ್ಲೇಶ್, ಸದಸ್ಯರಾದ ಜಗದೀಶ್, ರಾಜು ಇದ್ದರು.