ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ದೊಡ್ಡತ್ತೂರಿನ ಎಸ್.ಆರ್. ಪುರುಷೋತ್ತಮ್, ಉಪಾಧ್ಯಕ್ಷರಾಗಿ ಹೆಚ್. ಪುಟ್ಟೇಗೌಡ ಅವಿರೋಧವಾಗಿ ಆಯ್ಕೆಯಾದರು. ಶಿವಾನಂದ ರೈ, ಮಂಜುನಾಥ್ ಕೆ., ರುದ್ರಪ್ಪ, ಸಲೀನಾ, ರಂಜಿತ್ ಎ.ಜೆ., ಪದ್ಮ, ಗೌರಮ್ಮ, ಸುರೇಶ್ ಕುಮಾರ್ ಡಿ.ಟಿ., ಬಿಂದಮ್ಮ ಮತ್ತಿತರರು ಇದ್ದರು. 
ಕೊಡಗು

ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಎಸ್.ಆರ್. ಪುರುಷೋತ್ತಮ್ ಅಧ್ಯಕ್ಷ

ಕುಶಾಲನಗರ:
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ದೊಡ್ಡತ್ತೂರಿನ ಎಸ್.ಆರ್. ಪುರುಷೋತ್ತಮ್, ಉಪಾಧ್ಯಕ್ಷರಾಗಿ ಹೆಚ್. ಪುಟ್ಟೇಗೌಡ ಅವಿರೋಧವಾಗಿ ಆಯ್ಕೆಯಾದರು. ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಧಾನಕ್ಕೆ ಪುರುಷೋತ್ತಮ್ ಮತ್ತು ಪದ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟೆಗೌಡ ಮತ್ತು ಕೆ.ಎಸ್. ಗಿರೀಶ್ ನಾಮಪತ್ರಗಳನ್ನು ಸಲ್ಲಿಸಿದರು. ಪದ್ಮ ಮತ್ತು ಗಿರೀಶ್ ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು ಎಂದು ಚುನಾವಣಾ ಅಧಿಕಾರಿ ಸೋಮವಾರಪೇಟೆ ತಾಲೂಕು ಸಹಕಾರ ಇಲಾಖೆಯ ಅಧೀಕ್ಷಕ ಪಿ.ಬಿ. ಮೋಹನ್ ಕುಮಾರ್ ತಿಳಿಸಿದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಶಿವಾನಂದ ರೈ, ಮಂಜುನಾಥ್ ಕೆ., ರುದ್ರಪ್ಪ, ಸಲೀನಾ, ರಂಜಿತ್ ಎ.ಜೆ., ಪದ್ಮ, ಗೌರಮ್ಮ, ಸುರೇಶ್ ಕುಮಾರ್ ಡಿ.ಟಿ., ಬಿಂದಮ್ಮ, ರಮೇಶ್, ಗಿರೀಶ್ , ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನಿರ್ದೇಶಕ ಎಸ್.ಆರ್. ಸುನಿಲ್ ರಾವ್, ಗ್ರಾಮ ಪ್ರಮುಖರಾದ ರಾಮಣ್ಣ, ಪಾಪಣ್ಣ, ದಿನೇಶ್, ಮತ್ತಿತರರು ಇದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ರಾಮೇಗೌಡ, ಸಹಾಯಕ ಸುನಿಲ್ ಕುಮಾರ್ ಇದ್ದರು. ಅಧ್ಯಕ್ಷ, ಉಪಾಧ್ಯಕ್ಷ ಅಯ್ಕೆ ಪ್ರಕ್ರಿಯೆ ನಂತರ ಗ್ರಾಮಸ್ಥರು, ಸದಸ್ಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವದ ಆಚರಿಸಿದರು.