ಕ್ರೀಡಾಕೂಟ 
ಕೊಡಗು

ಇಂದಿನಿಂದ ಹಾತೂರಿನಲ್ಲಿ ಕ್ರೀಡಾಕೂಟ

ಪೊನ್ನಂಪೇಟೆ: ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಹಾಗೂ ಸಮಾಜ, ಬಾಳುಗೋಡು ಇವರ ವತಿಯಿಂದ 26ನೇ ವರ್ಷದ ಕ್ರೀಡಾಕೂಟವನ್ನು ಮೇ 1, 2 ಮತ್ತು 3 ರಂದು ಹಾತೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಎಫ್‌ಎಂಸಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೇ 1ರಂದು ಬೆಳಗ್ಗೆ 10.30 ಗಂಟೆಗೆ ಕ್ರೀಡಾಕೂಟಕ್ಕೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಚಾಲನೆ ನೀಡುವರು. ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಪಾಲ್ಗೊಳ್ಳುವರು.
ಮೂರು ದಿನಗಳ ಕಾಲ ಸಮಾಜದ ಬಾಂಧವರಿಗಾಗಿ ವಿವಿಧ ಕ್ರೀಡಾಕೂಟಗಳು ನಡೆಯಲಿವೆ. ಮೇ 3 ರಂದು ಮಧ್ಯಾಹ್ನ 2.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ವಕೀಲ ಹಾಗೂ ಸಮಾಜದ ಮಾಜಿ ಅಧ್ಯಕ್ಷ ಪಡಿಞರಂಡ ಜಿ.ಅಯ್ಯಪ್ಪ, ವೃತ್ತ ನಿರೀಕ್ಷಕ ತುದಿಮಾಡ ಸವಿ ಲೋಕೇಶ್, ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಕೊಂಗೇಪಂಡ ಮಾಚಯ್ಯ ಭಾಗವಹಿಸಲಿದ್ದಾರೆ.
ಮಾದರಿ ಕೃಷಿಕರಾದ ಪಂದಿಕಂಡ ಜಯ ಬೋಪಣ್ಣ, ಪಡಿಞರಂಡ ವೇಣುಕುಮಾರ್, ರಾಷ್ಟ್ರೀಯ ವೆಟರನ್ ಅಥ್ಲೆಟಿಕ್ ಮೀಟಲ್ ಸಾಧಕಿ ಮೂರೀರ ಶಾಂತಿ ಬೆಳ್ಳಿಯಪ್ಪ, ಅಚ್ಚಪಂಡ ಟೀನಾ ಸೋಮಣ್ಣ ಅವರನ್ನು ಸನ್ಮಾನಿಸಲಾಗುವುದು. ಎಸ್‌ಎಸ್‌ಎಲ್‌ಸಿ, ಪಿಯು ಹಾಗೂ ಪದವಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸಮಾಜದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುತ್ತದೆ ಎಂದು ಸಮಾಜದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.