ಪೊನ್ನಂಪೇಟೆ ತಾಲೂಕು ತಿತಿಮತಿ ಗ್ರಾಮದಲ್ಲಿ ನಡೆಯುತ್ತಿರುವ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು. ಧರ್ಮಜ ಉತ್ತಪ್ಪ, ಮಿದೇರಿರ ನವೀನ್, ಜೋಕಿಮ್, ಮರ್ವಿನ್ ಲೋಬೊ, ಮೇಲ್ರಯ್ ಲೋಬೊ ಇತರರಿದ್ದರು. 
ಕೊಡಗು

ದೈಹಿಕ, ಮಾನಸಿಕ ಆರೋಗ್ಯ ಸಮತೋಲನಕ್ಕೆ ಕ್ರೀಡೆ ಸಹಕಾರಿ

ಸಿದ್ದಾಪುರ: ಕ್ರೀಡೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನಕ್ಕೆ ಅತ್ಯಂತ ಅಗತ್ಯವೆಂದು ಶಾಸಕ ಎ.ಎಸ್.ಪೊನ್ನಣ್ಣ, ಹೇಳಿದರು.
ಪೊನ್ನಂಪೇಟೆ ತಾಲೂಕು ತಿತಿಮತಿ ಗ್ರಾಮದಲ್ಲಿ ನಡೆಯುತ್ತಿರುವ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿ ಅವರು ಮಾತನಾಡಿ, ದೇಹಕ್ಕೆ ವ್ಯಾಯಾಮ ನೀಡುವ ಕ್ರೀಡೆ ಮಾನಸಿಕವಾಗಿ ಸಹ ಆರೋಗ್ಯವನ್ನು ವೃದ್ಧಿಸುತ್ತದೆ. ಶಿಸ್ತಿನ ಗುಣಗಳನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಕ್ರೀಡೆಯನ್ನು ಸದಾ ಸಕಾರಾತ್ಮಕ ಮನೋಭಾವದಿಂದ ಆಡಬೇಕು ಮತ್ತು ಅದರಿಂದ ಲಭಿಸುವ ಲಾಭವನ್ನು ವೈಯಕ್ತಿಕ ಜೀವನದ ಜತೆಗೆ ಸಮಾಜದ ಅಭಿವೃದ್ಧಿಗೂ ಬಳಸಬೇಕು. ಕ್ರೀಡೆಯಿಂದ ದೊರೆಯುವ ಸದ್ಗುಣಗಳು ಸಮಾಜದ ಭವಿಷ್ಯ ನಿರ್ಮಾಣಕ್ಕೆ ಸಹಕಾರಿ ಆಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ನವೀನ್, ಪಕ್ಷದ ಮುಖಂಡರಾದ ಜೋಕಿಮ್, ಮರ್ವಿನ್ ಲೋಬೊ, ಮೇಲ್ರಯ್ ಲೋಬೊ, ತೆರೇಸಾ ವಿಕ್ಟರ್, ಫಿಲೋಮೀನಾ, ಜೋನ್ಸನ್ ಪಿಂಟೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.