ಸಿದ್ದಾಪುರದ ಸೇಕ್ರೆಡ್ ಹಾರ್ಟ್ ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಸ್ಕೋಲಿಯೋಸಿಸ್(ಬೆನ್ನುಮೂಳೆ ವಕ್ರತೆ) ತಪಾಸಣಾ ಶಿಬಿರದಲ್ಲಿ ಮಕ್ಕಳು ತಪಾಸಣೆ ಮಾಡಿಸಿಕೊಂಡರು.
ಸಿದ್ದಾಪುರ: ಲಯನ್ಸ್ ಕ್ಲಬ್ ಸಿದ್ದಾಪುರ, ಕೊಡಗು ಹಾಗೂ ಸ್ಕೋಲಿಯೋಸಿಸ್ ಫೌಂಡೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಸಿದ್ದಾಪುರದ ಸೇಕ್ರೆಡ್ ಹಾರ್ಟ್ ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಸ್ಕೋಲಿಯೋಸಿಸ್ (ಬೆನ್ನುಮೂಳೆ ವಕ್ರತೆ) ತಪಾಸಣಾ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರೆಯಿತು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಆಯೋಜಿಸಿದ್ದ ಶಿಬಿರದಲ್ಲಿ ಅನೇಕ ಮಕ್ಕಳನ್ನು ತಪಾಸಣೆ ಮಾಡಿಸಲಾಯಿತು. ಮೂಳೆ ತಜ್ಞರಾದ ಡಾ. ಥಾಮಸ್ ಕ್ರಿಷೆನ್ ಜೋಸೆಫ್ ಅವರು ಮಕ್ಕಳಲ್ಲಿ ಸ್ಕೋಲಿಯೋಸಿಸ್ ಸಮಸ್ಯೆ ಇರುವುದನ್ನು ಪರಿಶೀಲಿಸಿ ವೈದ್ಯಕೀಯ ಸಲಹೆಗಳನ್ನು ನೀಡಿದರು.
ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಯ ಕುರಿತು ಮಾರ್ಗದರ್ಶನ ನೀಡಲಾಯಿತು. ಅಲ್ಲದೆ ಬೆನ್ನುಮೂಳೆಗೆ ಸಂಬಂಧಿಸಿದ ಇತರ ಆರೋಗ್ಯ ಸಮಸ್ಯೆಗಳ ಕುರಿತು ಬಂದಿದ್ದ ರೋಗಿಗಳಿಗೂ ಡಾ. ಕ್ರಿಷೆನ್ ಜೋಸೆಫ್ ಸಮಾಲೋಚನೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿದರು.
ಲಯನ್ಸ್ ಕ್ಲಬ್ ಸಿದ್ದಾಪುರ ಅಧ್ಯಕ್ಷೆ ವಿದ್ಯಾ ದೇವಯ್ಯ, ಕಾರ್ಯದರ್ಶಿ ವಿಪಿನ್ ಸುಬ್ಬಯ್ಯ, ಖಜಾಂಚಿ ದರ್ಶನ್ ಬೋಪಣ್ಣ, ಥಾಮಸ್ ಮ್ಯಾಥ್ಯೂ, ವಿವೇಕ್ ಜೋಯಪ್ಪ ಇತರರು ಇದ್ದರು.