ಪನ್ನಂಗಾಲತಮ್ಮೆ ಉತ್ಸವ ಮೂರ್ತಿ.  
ಕೊಡಗು

ಮಗ್ಗುಲ ಶ್ರೀ ಪನ್ನಂಗಾಲತಮ್ಮೆಗೆ ವಿಶೇಷ ಪೂಜೆ

ಪ್ರಮುಖ ಮುಖ್ಯಾಂಶಗಳು

  • ದೇಗುಲದ ವಾರ್ಷಿಕೋತ್ಸವ ಪ್ರಯುಕ್ತ ಧಾರ್ಮಿಕ ಕಾರ್ಯ
ವಿರಾಜಪೇಟೆ: ಮಗ್ಗುಲ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಪನ್ನಂಗಾಲತಮ್ಮೆ ದೇವಸ್ಥಾನದ ವಾರ್ಷಿಕ ಮಹೋತ್ಸವವನ್ನು ಶನಿವಾರ ಮತ್ತು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಶನಿವಾರ ಬೆಳಗ್ಗೆ 8 ಗಂಟೆಗೆ ನಾಗ ದೇವರ ಪೂಜೆ, 10 ಗಂಟೆಗೆ ಚಟ್ಟಕುಟಡ ಮನೆಯಿಂದ ಭಂಡಾರವನ್ನು ದೇವಸ್ಥಾನಕ್ಕೆ ತರುವುದು, ಮಧ್ಯಾಹ್ನ 1 ಗಂಟೆಗೆ ಶ್ರೀ ಪನ್ನಂಗಾಲತಮ್ಮೆ ದೇವಿಯ ಮಹಾಪೂಜೆ, 2 ಗಂಟೆಗೆ ಅಯ್ಯಪ್ಪ ಹಾಗೂ ವಿಷ್ಣು ಮೂರ್ತಿಗೆ ಪೂಜೆ, 3 ಗಂಟೆಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಭಾನುವಾರ ಬೆಳಗ್ಗೆ 10 ಗಂಟೆಗೆ ಶ್ರೀ ಪನ್ನಂಗಾಲತಮ್ಮೆ ದೇವಿಯ ದರ್ಶನ, 11 ಗಂಟೆಗೆ ಮೂರ್ತಿ, ಚಾವುಂಡಿ, ಗುಳಿಗ ದೇವರಿಗೆ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 12.30ಕ್ಕೆ ಚಾವುಂಡಿ ಹಾಗೂ ಮೂರ್ತಿ ದೇವರ ಬಲಿಪೂಜೆ, ಪೂದ ದೇವರ ವಿಶೇಷ ಪೂಜೆ, ಪನ್ನಂಗಾಲತಮ್ಮೆ ದೇವರ ಉತ್ಸವ ಮೂರ್ತಿಯೊಂದಿಗೆ ದೇವರ ಕೆರೆಗೆ ಹೊರಡುವುದು, ನಂತರ ದೇವಾಲಯ ಪ್ರದಕ್ಷಣೆ ನಡೆಸಲಾಯಿತು.
ನಗರ ಸೇರಿದಂತೆ ಅಕ್ಕಪಕ್ಕದ ಗ್ರಾಮದ ಭಕ್ತರು ಆಗಮಿಸಿ ದೇವಿಗೆ ಹರಕೆ ಮತ್ತು ಪೂಜೆ ಸಲ್ಲಿಸಿದರು.ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಚಟ್ಟಕುಟಡ ರಚನ್, ಉಪಾಧ್ಯಕ್ಷ ಚಟ್ಟಕುಟಡ ನಿರನ್, ಕಾರ್ಯದರ್ಶಿ ಚಟ್ಟಕುಟ್ಟಡ ಗೌತಮ್, ಖಜಾಂಜಿ ಕುಪರೆಕುಟ್ಟಡ ಸಾಗರ್ ಪೂವಣ್ಣ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು ಇದ್ದರು.