ಸುಂಟಿಕೊಪ್ಪದ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಹಾಗೂ ಮೇರಿ ಶಾಲಾವರಣದಲ್ಲಿ ಶುಭ ಶುಕ್ರವಾರದ ಸಾಂಘ್ಯಗಳಲ್ಲಿ ಪಾಲ್ಗೊಂಡಿದ್ದ ಕ್ರೈಸ್ತರು.
ಸುಂಟಿಕೊಪ್ಪ: ಶುಭಶುಕ್ರವಾರದ ಅಂಗವಾಗಿ ಸಂತ ಅಂತೋಣಿ ದೇವಾಲಯದ ವತಿಯಿಂದ ಸಂತಮೇರಿ ಶಾಲಾ ಸಭಾಂಗಣದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಹಾಗೂ ಆರಾಧಾನೆಯನ್ನು ಶುಭ ಶುಕ್ರವಾರದ ಸಾಂಘ್ಯಗಳನ್ನು ಬೆಂಗಳೂರಿನ ಧರ್ಮಕೇಂದ್ರ ಪ್ರೇಮ್ಕುಮಾರ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಳಾದ ರೇ.ಫಾ.ವಿಜಯಕುಮಾರ್ ಪ್ರಸುತ್ತಪಡಿಸಿದರು. ಕ್ರೈಸ್ತರು ವಿಶೇಷ ಪ್ರಾರ್ಥನೆಯಲ್ಲಿ ಶ್ರದ್ಧಾ-ಭಕ್ತಿಯಿಂದ ತೊಡಗಿಸಿಕೊಂಡರು.
ದೇವಾಲಯದಲ್ಲಿ ಶುಭ ಶುಕ್ರವಾರದ ಅಂಗವಾಗಿ ಬೆಳಗ್ಗಿನಿಂದಲೇ ವಿಶೇಷ ಪ್ರಾರ್ಥನೆ ಹಾಗೂ ಸುತ್ತು ಆರಾಧನೆಗಳನ್ನು ದೇವಾಲಯದ ಧರ್ಮಗುರುಗಳು ಹಾಗೂ ಕನ್ಯಾಸ್ತ್ರೀಯರು ನೇರವೇರಿಸಿದರು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತರು ದೇವಾಲಯದಲ್ಲಿ ಪಾಲ್ಗೊಂಡಿದ್ದರು. ಮದ್ಯಾಹ್ನ 2.30 ಗಂಟೆಗೆ ಪ್ರಭು ಕ್ರಿಸ್ತರು ಅನುಭವಿಸಿದ ಶಿಲುಬೆ ಯಾತೆನೆಯ ಸ್ಮರಣೆಯು ಆರಂಭಗೊಂಡಿತು. ಆರಾಧನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ತೊಂಡಗಿಸಿಕೊಂಡರು.
ಈ ಸಂದರ್ಭದಲ್ಲಿ ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತ್ರೀಯರು ಹಾಗೂ ನೂರಾರು ಸಂಖ್ಯೆಯಲ್ಲಿ ನೇರೆದಿದ್ದ ಕ್ರೈಸ್ತರು ದಿವ್ಯಬಲಿಪೂಜೆಯಲ್ಲಿ ಪಾಲ್ಗೊಂಡು, ದೇವರ ಕೃಪಾಶೀರ್ವಚನವನ್ನು ಪಡೆದುಕೊಂಡರು.