ಸೋಮವಾರಪೇಟೆ ತಾಲೂಕಿನ ಗರಗಂದೂರು ಬಿ.ಗ್ರಾಮದ ಶ್ರೀಗುರುಬಸವೇಶ್ವರ ದೇವರ 16ನೇ ವಾರ್ಷಿಕ ಮಹಾಪೂಜೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸೋಮವಾರಪೇಟೆ: ತಾಲೂಕಿನ ಗರಗಂದೂರು ಬಿ.ಗ್ರಾಮದ ಶ್ರೀ ಗುರುಬಸವೇಶ್ವರ ದೇವರ 16ನೇ ವಾರ್ಷಿಕ ಮಹಾಪೂಜೆ ಶ್ರದ್ಧಾಭಕ್ತಿಯಿಂದ ಸೋಮವಾರ ಜರುಗಿತು.
ಮೊದಲಿಗೆ ಗ್ರಾಮದಲ್ಲಿ ಪ್ರಾಚೀನ ಕಾಲದಿಂದ ನೆಲೆನಿಂತಿರುವ ಶ್ರೀಈಶ್ವರ ದೇವರು, ಶ್ರೀತಾಯಿ ಚೌಡೇಶ್ವರಿ, ಶ್ರೀ ನಾಗದೇವರನ್ನು ಆರಾಧಿಸಲಾಯಿತು.
ನಂತರ ಶ್ರೀಬಸವೇಶ್ವರ ದೇವಳದಲ್ಲಿ ಗಣಪತಿ ಹೋಮ, ಶ್ರೀದೇವರಿಗೆ ರುದ್ರಾಭಿಷೇಕ, ಅಷ್ಟೋತ್ತರಗಳು, ರಾಜೋಪಚಾರ ನಡೆಯಿತು.
ಅರ್ಚಕರಾದ ಬಿ.ಈ.ಮಂಜುನಾಥ್, ಮೋಹನ್ ಮೂರ್ತಿ ಪೂಜಾ ಸಂಕಲ್ಪದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಸಿ.ಕೆ. ರೋಹಿತ್ ಮತ್ತು ಸದಸ್ಯರು, ಗ್ರಾಮದ ಮುಖ್ಯಸ್ಥರಾದ ಕೆ.ಡಿ ವೀರಪ್ಪ, ಮೂಡುಗದ್ದೆ. ಡಿ.ಲಿಖಿತ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗದೊಂದಿಗೆ ಉತ್ಸವಕ್ಕೆ ತೆರೆ ಬಿದ್ದಿತು.