ಸೋಮವಾರಪೇಟೆ ಇನ್ನರ್‌ವ್ಹೀಲ್ ಕ್ಲಬ್ ನ ಪದಾಧಿಕಾರಿಗಳು ಶುಕ್ರವಾರ ಚೈತನ್ಯ ಮಂದಿರ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಸಹಾಯ ಧನದ ಚೆಕ್ ವಿತರಿಸಿದರು. ತನ್ಮಯಿ, ಆನಂದ್, ಲತಾ ಇದ್ದರು. 
ಕೊಡಗು

ವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಎ. ಆರ್. ರಘುರಾಮ
ಸೋಮವಾರಪೇಟೆ: ವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮತ್ತು ಆಹಾರ ತಜ್ಞೆ ತನ್ಮಯಿ ಪ್ರವೀಣ್ ಹೇಳಿದರು.
ಇನ್ನರ್‌ವ್ಹೀಲ್ ಕ್ಲಬ್ ಗೋಲ್ಡ್ ಸದಸ್ಯರು ಚೈತನ್ಯ ಮಂದಿರ ವೃದ್ಧಾಶ್ರಮ ಮತ್ತು ಶಿಶುಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಅವರು ಮಾತನಾಡಿದರು. ವೃದ್ಧರಿಗೆ ಸಮತೋಲನ ಆಹಾರ ನೀಡಬೇಕು. ಶುಚಿತ್ವ ಪಾಲನೆಗೆ ಮಹತ್ವ ನೀಡಬೇಕು ಎಂದು ಅವರು ಸಲಹೆ ನೀಡಿದರು. ಕ್ಲಬ್‌ನ ಸದಸ್ಯರು ಆಶ್ರಮದ ನಿವಾಸಿಗಳೊಂದಿಗೆ ಸೌಹಾರ್ದ ಮಾತುಕತೆ ನಡೆಸಿದರು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ವಿವಿಧ ಆಟೋಟ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಿದರು.
ಆಶ್ರಮದ ನಿರ್ವಹಣೆಗೆ 21 ಸಾವಿರ ರೂ. ದೇಣಿಗೆ ನೀಡಲಾಯಿತು. ನಂತರ ಶಿಶುಕೇಂದ್ರಕ್ಕೆ ಭೇಟಿ ನೀಡಿ
ಸಂಸ್ಥೆ ಸದಸ್ಯರು ಹಾಲಿನ ಪುಡಿ ವಿತರಿಸಿದರು. ಆಶ್ರಮದ ಉಪಾಧ್ಯಕ್ಷ ಎಚ್.ಸಿ.ಆನಂದ್, ಇನ್ನರ್ ವ್ಹೀಲ್ ಕ್ಲಬ್‌ನ ಉಪಾಧ್ಯಕ್ಷೆ ಲತಾ ಮಂಜು, ಪದಾಧಿಕಾರಿಗಳಾದ ಸಂಧ್ಯಾ ರಾಣಿ, ಸಂಗೀತಾ, ಪ್ರೇಮಾ, ಲತಾ ನಾಗೇಶ್, ಭಾರ್ಗವಿ, ರಾಜೇಶ್ವರಿ, ವನಿತಾ, ದಿವ್ಯಾ, ಚಂದ್ರಿಕಾ ಹಾಗೂ ರಾಣಿ ಭಾಗವಹಿಸಿದ್ದರು.