ಸೋಮವಾರಪೇಟೆ ಸಮೀಪದ ಬೇಳೂರು ಮಂಡಲದ ವತಿಯಿಂದ ಸೋಮವಾರ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು. 
ಕೊಡಗು

ಸನಾತನ ಧರ್ಮ ಉಳಿದರೆ ಭಾರತ ಉಳಿಯುತ್ತದೆ

ಎ. ಆರ್. ರಘುರಾಮ
ಸೋಮವಾರಪೇಟೆ : ವಿಶ್ವಕ್ಕೆ ಹಿಂದುತ್ವದ ಸಂದೇಶ ಸಾರಿದ ರಾಷ್ಟ್ರ ಭಾರತ ಎಂದು ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪುತ್ತೂರು ರವೀಂದ್ರ ಹೇಳಿದರು.
ಪಟ್ಟಣದ ಬೇಳೂರು ಮಂಡಲದ ವತಿಯಿಂದ ಸೋಮವಾರ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದುತ್ವದ ಹರಿಕಾರ ಸ್ವಾಮಿ ವಿವೇಕಾನಂದ ಅವರು ಭಾರತೀಯ ಸಂಸ್ಕೃತಿ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿ ಭಾರತದತ್ತ ಜಗತ್ತಿನ ಗಮನ ಸೆಳೆದರು. ಸನಾತನ ಧರ್ಮ ಉಳಿದರೆ ಭಾರತ ಉಳಿಯುತ್ತದೆ ಎಂದು ಪ್ರತಿಯೊಬ್ಬರೂ ಅರಿಯಬೇಕು ಎಂದು ಅವರು ತಿಳಿಸಿದರು ಎಂದರು.
ಬಸವಾಪಟ್ಟಣ ತೋಟಂದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮ ಜಾಗೃತಿ ಮೂಡಿಸುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಮುಖ ಪಾತ್ರವಹಿಸಿದೆ. ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಹಿಂದೂ ಸಂಗಮಗಳು ನಡೆಯುತ್ತಿವೆ ಎಂದರು. ಹಿಂದೂಗಳು ಸಂಘಟಿತರಾಗಿ ಜಾಗೃತರಾಗಬೇಕೆಂದು ಕರೆ ನೀಡಿದರು.
ಹಿಂದೂ ಸಂಗಮ ಅಯೋಜನ ಸಮಿತಿ ಪದಾಧಿಕಾರಿಗಳಾದ ಸೀತಾರಾಮ್, ಸನತ್, ಚಂದ್ರು ಹುಲ್ಲೂರಿಕೊಪ್ಪ ಗುರುಮಲ್ಲೇಶ ಇತರರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಕುಸುಬೂರು ದೇವಾಲಯದ ಬಳಿಯಿಂದ ಭವ್ಯ ಶೋಭಾಯಾತ್ರೆ ನಡೆಯಿತು.