ಕೆದಮುಳ್ಳೂರು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು. ಮಾಳೇಟೀರ ಪ್ರಶಾಂತ್, ಮಹೇಶ್, ಜೇಫ್ರಿ ಉತ್ತಪ್ಪ, ಜಾಲಚಂಗಪ್ಪ, ಮಿಟ್ಟು ಅಯ್ಯಪ್ಪ, ಅಮಿತ್ ಬೇಪಡಿಯಂಡ, ಇಸ್ಮಾಯಿಲ್, ಆಲಿ ಇದ್ದರು. 
ಕೊಡಗು

ರಸ್ತೆ ಅಭಿವೃದ್ಧಿಯಿಂದ ಸುಗಮ ಸಂಚಾರ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • road development
ವಿರಾಜಪೇಟೆ: ರಸ್ತೆಗಳ ಅಭಿವೃದ್ಧಿಯಿಂದ ಸುಗಮ ಸಂಚಾರ ಸಾಧ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರ ಕೋರಿಕೆ ಮೇರೆಗೆ ಕೆದಮುಳ್ಳೂರಿನಿಂದ ಕ್ಲಬ್ ಮಹೇಂದ್ರ ಕಡೆಗೆ ತೆರಳುವ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ. ಇದೇ ರೀತಿ ಸಾರ್ವಜನಿಕರ ಅಗತ್ಯಗಳನ್ನು ಹಂತಹಂತವಾಗಿ ಪೂರೈಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಭರವಸೆ ನೀಡಿದರು.
ಕೆದಮುಳ್ಳೂರಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿ, ರಸ್ತೆಯ ಅಭಿವೃದ್ಧಿಗಾಗಿ 10 ಲಕ್ಷ ರೂ.ಗಳನ್ನು ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ವಿರಾಜಪೇಟೆ ಬ್ಲಾಕ್ ಕೆಡಿಪಿ ಸದಸ್ಯ ಮಾಳೇಟೀರ ಪ್ರಶಾಂತ್, ವಲಯ ಅಧ್ಯಕ್ಷ ನಡಿಕೇರಿಯಂಡ ಮಹೇಶ್, ಜೇಫ್ರಿ ಉತ್ತಪ್ಪ, ಜಾಲಚಂಗಪ್ಪ, ಮಿಟ್ಟು ಅಯ್ಯಪ್ಪ, ಅಮಿತ್ ಬೇಪಡಿಯಂಡ, ಮಿತಲ್ತಂಡ ಇಸ್ಮಾಯಿಲ್, ಆಲಿ, ಡ್ಯಾನಿ, ಜಿತನ್ ಗುತ್ತಿಗೆದಾರ ರಂಜು ಮಾದಪ್ಪ, ರಾಜ, ಮಹಾದೇವ, ಮಂಜುನಾಥ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.