ಈ ಹಿಂದೆ ನಿರ್ಧðರಿಸಿಸದ್ದಂತೆ ಕೊಡಗು ಬಂದ್ ಕೈ ಬಿಟ್ಟು ಆ. 7ರಂದು ಜಿಲ್ಲಾ ಎಸ್‌ಪಿ ಕಚೇರಿ ಮುತ್ತಿಗೆಗೆ ಹಾಕುವುದಾಗಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದ್ದಾರೆ. ಈ ಸಂಬAಧ ಇಲ್ಲಿ ನಡೆದ ಸಭೆ ನಂತರ ಮಾಹಿತಿ ನೀಡಿದ ಅವರು ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಲು ಹೊರಟಿದ್ದ ಕೊಡಗಿನ ರೈತರನ್ನು ಪೊಲೀಸರು ತಡೆದು ವಶಕ್ಕೆ ಪಡೆದ ಘಟನೆಯನ್ನು ಖಂಡಿಸಿ, ವಿವಿಧ ಸಂಘಟನೆಗಳೊAದಿಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಈ ಮೊದಲು ಯೋಜಿಸಲಾಗಿದ್ದ ಕೊಡಗು ಬಂದ್ ಪ್ರತಿಭಟನೆಯನ್ನು ಕೈಬಿಡಲಾಗಿದೆ. ಆದರೆ, ಇದರ ಬದಲಾಗಿ ಮುಂಬರುವ ಆ. 7ರಂದು ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಎಸ್‌ಪಿ ಕಚೇರಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಬಿಡದಿ ಟೌನ್‌ಶಿಪ್ ವಿರೋಧಿ ಹೋರಾಟಕ್ಕೆ ಶಾಂತಿಯುತವಾಗಿ ತೆರಳುತ್ತಿದ್ದ ರೈತರನ್ನು ಮಧ್ಯ ದಾರಿಯಲ್ಲೇ ತಡೆದು ಬಂಧಿಸಲು ಅನುಮತಿ ನೀಡಿದ ಪೊಲೀಸ್ ಇಲಾಖೆಯ ಕ್ರಮ ತೀವ್ರ ಖಂಡನೀಯ. ಆದೇಶದ ಪ್ರತಿ ನೀಡುವವರೆಗೆ ಹೋರಾಟ ನಿಲ್ಲುವುದಿಲ್ಲ. ಶಾಂತಿಯುತವಾಗಿ ತೆರಳಿ ಬೆಂಬಲ ಸೂಚಿಸುವುದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಯ ಹಕ್ಕು. ರಾಜ್ಯದ ಉಳಿದ ಯಾವ ಜಿಲ್ಲೆಗಳಲ್ಲೂ ಇಲ್ಲದಂತಹ ವಿಚಿತ್ರ ಆದೇಶ ಹಾಗೂ ನಿರ್ಬಂಧ ಕೊಡಗು ಜಿಲ್ಲೆಗೆ ಮಾತ್ರ ಹೇಗೆ ಅನ್ವಯವಾಯಿತು? ರೈತರ ಚಲನವಲನವನ್ನು ತಡೆಯಲು ಪೊಲೀಸರಿಗೆ ಅಧಿಕಾರ ಕೊಟ್ಟವರು ಯಾರು ಎಂಬ ಪ್ರಶ್ನೆಗೆ ಜಿಲ್ಲಾ ಪೊಲೀಸ್ ಆಡಳಿತ ಸ್ಪಷ್ಟನೆ ನೀಡಬೇಕು. ನಮಗೆ ಆ ನಿರ್ಬಂಧಿತ ಆದೇಶದ ಪ್ರತಿ ಸಿಗುವವರೆಗೆ ನಮ್ಮ ಚಳವಳಿ ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದರು.
ಈ ಸಂದರ್ಭ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಮಯಾಮುಡಿ ಘಟಕದ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಅಮ್ಮತಿ ಘಟಕದ ಅಧ್ಯಕ್ಷ ಚೇನಂಡ ಪೂಣಚ್ಚ ಮತ್ತಿತರರು ಇದ್ದರು.