ಶ್ರೀಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ. 
ಕೊಡಗು

ಕರಡಿಗೋಡಿನಲ್ಲಿ ವಿಜೃಂಭಣೆಯ ಶ್ರೀಬಸವೇಶ್ವರ ದೇವರ ವಾರ್ಷಿಕೋತ್ಸವ

ಸಿದ್ದಾಪುರ: ಕರಡಿಗೋಡು ಗ್ರಾಮದಲ್ಲಿ ಶ್ರೀಬಸವೇಶ್ವರ ದೇವರ ವಾರ್ಷಿಕೋತ್ಸವ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ತಂತ್ರಿ ಬಿಳಿಗೇರಿ ಉದಯ ಕುಮಾರ್ ಅವರ ನೇತೃತ್ವದಲ್ಲಿ ಭಾನುವಾರ ಸಂಜೆ ಗೋ ಪೂಜೆ, ನಿತ್ಯಪೂಜೆ ಹಾಗೂ ತೆಕ್ಕರ ಮನೆಯಿಂದ ಭಂಡಾರ ಇಳಿಸುವ ಕಾರ್ಯಕ್ರಮಗಳು ನಡೆದವು.
ಸೋಮವಾರ ಬೆಳಗ್ಗೆ 8.30ಕ್ಕೆ ಗಣಪತಿ ಹೋಮ, 10 ಗಂಟೆಗೆ ಕಲಶ ಪೂಜೆ, 11 ಗಂಟೆಗೆ ಗಂಗಾಸ್ನಾನ ನೆರವೇರಿತು. ಬಳಿಕ ಕಾವೇರಿ ನದಿಯಿಂದ ಶ್ರೀಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ಗ್ರಾಮದಲ್ಲಿ ಸಂಭ್ರಮದಿಂದ ನಡೆಯಿತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಜರುಗಿ, ತೀರ್ಥ ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ನಡೆಯಿತು. ಮಧ್ಯಾಹ್ನ 3.30ಕ್ಕೆ ದೇವರ ಮನೆ ಮೆರವಣಿಗೆ ಹಾಗೂ ಸಂಜೆ 7 ಗಂಟೆಗೆ ಕೊಂಡ ಪೂಜೆ ನಡೆಯಿತು.
ಮಂಗಳವಾರ ಬೆಳಗ್ಗೆ 8 ಗಂಟೆಗೆ ರುದ್ರಪಾರಾಯಣ, 10 ಗಂಟೆಗೆ ದೇವತಾ ಪ್ರಾರ್ಥನೆ, ಗಂಗಾಪೂಜೆ ಹಾಗೂ ಗಂಗಾ ಸ್ನಾನ ನೆರವೇರಿತು. ನಂತರ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಕೊಂಡ ಸೇವೆ, ಮಹಾಪೂಜೆ, ಹರಕ್ಕೆ ಒಪ್ಪಿಸುವುದು, ತೀರ್ಥ ಪ್ರಸಾದ, ಅನ್ನ ಸಂತರ್ಪಣೆ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.