ಕಾರ್ಯಕ್ರಮದಲ್ಲಿ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ಮಾತನಾಡಿದರು. ರವಿ, ಡಾ. ವಿಜಯಸಿಂಹ ದೊರೆಸ್ವಾಮಿ, ಧನುಕುಮಾರ್, ಮಮತಾ ಇದ್ದರು. 
ಕೊಡಗು

ಸರಕಾರಿ ಸೌಲಭ್ಯ ಕುರಿತು ಮಾಹಿತಿ ಕಾರ್ಯಾಗಾರ

ಸಿದ್ದಾಪುರ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್ )ದಿ ಆರ್ಗನೈಜೇಷನ್ ಫಾರ್ ದ ಡೆವಲಪ್ ಮೆಂಟ್ ಆಫ್ ಪೀಪಲ್ (ಓಡಿಪಿ),ಹಾಗೂ ರೂಲ್ ಇಂಡಿಯಾ ಹೆಲ್ತ್ ಪ್ರಾಜೆಕ್ಟ್ (ಆರ್ ಐ ಎಚ್ ಪಿ) ಅಮ್ಮತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ತಪಾಸಣೆ ಹಾಗೂ ಸರ್ಕಾರಿ ಇಲಾಖೆಗಳ ಸೌಲಭ್ಯಗಳ ಕುರಿತು ಜಾಗೃತಿ ಕಾರ್ಯಕ್ರಮ ವಾಲ್ನೂರಿ ಸಮುದಾಯ ಆರೋಗ್ಯಕೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಆರ್‌ಐಎಚ್‌ಪಿ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ. ಚಂದ್ರು ಅವರು ಉದ್ಘಾಟಿಸಿ ಮಾತನಾಡಿ, ಒತ್ತಡದ ಬದುಕಿನ ಸನ್ನಿವೇಶದಲ್ಲಿ ಆರೋಗ್ಯದ ಕಡೆ ಸಾರ್ವಜನಿಕರು ಗಮನಹರಿಸದಿರುವುದು ದುರಾದೃಷ್ಟಕರ. ತಮ್ಮ ಒತ್ತಡದ ಬದುಕಿನ ನಡುವೆಯೂ ಪೌಷ್ಟಿಕ ಆಹಾರ ಕ್ರಮಗಳನ್ನು ರೂಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ವಹಿಸಿಕೊಂಡು ಮಾತನಾಡಿ. ಗ್ರಾಮ ಪಂಚಾಯತಿಗಳಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಅವರು ತಕ್ಷಣ ಸೌಲಭ್ಯಗಳಿಗೆ ಸರ್ವರೂ ಅರ್ಜಿ ಹಾಕುವಂತೆ ಸಲಹೆ ನೀಡಿದರು
ಆರ್‌ಐಎಚ್ಪಿ ಆಸ್ಪತ್ರೆಯ ನೇತ್ರತಜ್ಞರಾದ ಡಾ. ವಿಜಯಸಿಂಹ ದೊರೆಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಕೇಶಿಣಿ, ಗ್ರಾಮ ಪಂಚಾಯತ್ ಕಾರ್ಯಧರ್ಶಿ ರವಿ, ಓಡಿಪಿ ಸಂಘಟನೆಯ ಮೇಲ್ವಿಚಾರಕರಾದ ಮೆಲ್ವಿನ್, ಐಟಿಡಿಪಿ ಇಲಾಖೆಯ ಮಧು, ಓಡಿಪಿ ವಲಯ ಸಂಯೋಜಕರಾದ ಜಾಯ್ಸ ಮೆನೇಜಸ್, ಧನುಕುಮಾರ್, ಮಮತಾ ಇತರರು ಇದ್ದರು.
ಇದೇ ಸಂದರ್ಭದಲ್ಲಿ ರೋಗಿಗಳಿಗೆ ಸ್ಥಳದಲ್ಲೆ ಉಚಿತ ಔಷಧಿಗಳನ್ನು ವಿತ್ತರಿಸಲಾಯಿತು.