ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಆರ್‌ಪಿಎಲ್ ಬ್ರಿಡ್ಜ್ ಕೋರ್ಸ್ ಅಂಗವಾಗಿ ಗ್ಲೋಬಲ್ ಮೆಡ್ ಎಂಗ್ ಸಲ್ಯೂಶನ್ ಸಂಸ್ಥೆಯ ನೇತೃತ್ವದಲ್ಲಿ ತರಬೇತಿ ಕಾರ್ಯಾಗಾರ.
ಸಿದ್ದಾಪುರ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಆರ್‌ಪಿಎಲ್ ಬ್ರಿಡ್ಜ್ ಕೋರ್ಸ್ ಅಂಗವಾಗಿ ಗ್ಲೋಬಲ್ ಮೆಡ್ ಯಂಗ್ ಸಲ್ಯೂಶನ್ ಸಂಸ್ಥೆಯ ನೇತೃತ್ವದಲ್ಲಿ ತರಬೇತಿ ಕಾರ್ಯಾಗಾರ ವಿರಾಜಪೇಟೆ ಪುರಸಭೆ ಸಭಾಂಗಣದಲ್ಲಿ ಇತೀಚೆಗೆ ನಡೆಯಿತು.
ಕಾರ್ಯಾಗಾರದಲ್ಲಿ ತರಬೇತುದಾರ ಕಾರ್ತಿಕ್ ಅವರು ಕೆಲಸದ ಸ್ಥಳದಲ್ಲಿ ಕಾರ್ಮಿಕರು ಕಡ್ಡಾಯವಾಗಿ ಧರಿಸಬೇಕಾದ ಸುರಕ್ಷತಾ ಉಪಕರಣಗಳು ಹಾಗೂ ಇಲಾಖೆಯಿಂದ ಲಭ್ಯವಾಗುವ ವಿವಿಧ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಕಾರ್ಮಿಕ ಇಲಾಖೆಯ ಅಧಿಕಾರಿ ಪ್ರಸನ್ನ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಆಯ್ಕೆ ಮಾಡಲಾದ ಸುಮಾರು 1000 ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 10 ದಿನಗಳ ಕಾಲ ಈ ತರಬೇತಿ ನೀಡಲಾಗುತ್ತಿದ್ದು, ಭಾಗವಹಿಸುವವರಿಗೆ ದಿನಗೂಲಿ, ಉಚಿತ ಊಟ ಹಾಗೂ ಸುರಕ್ಷತಾ ಉಪಕರಣಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಆರ್‌ಪಿಎಲ್ ಸಿಬ್ಬಂದಿ ಪ್ರದೀಪ್, ದರ್ಶನ್ ಮತ್ತಿತರರು ಹಾಜರಿದ್ದರು.