ಸೋಮವಾರಪೇಟೆ ಪಿಎಂಶ್ರೀ ಜಿಎಂಪಿ ಶಾಲೆಯಲ್ಲಿ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿ, ಓಣಂ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  
ಕೊಡಗು

ಪಿಎಂಶ್ರೀ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ಸೋಮವಾರಪೇಟೆ: ಇಲ್ಲಿನ ಪಿಎಂಶ್ರೀ ಜಿಎಂಪಿ ಶಾಲೆಯಲ್ಲಿ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿ, ಓಣಂ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಡೆಸಿಕೊಟ್ಟರು. ಎಲ್‌ಕೆಜಿ, ಯುಕೆಜಿ ಮತ್ತು ಒಂದನೇ ತರಗತಿ ವಿದ್ಯಾರ್ಥಿಗಳು ಶ್ರೀ ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಸಂಭ್ರಮಿಸಿದರು.
ಈ ಸಂದರ್ಭ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ಕಾವ್ಯಾ, ಮುಖ್ಯಶಿಕ್ಷಕಿ ಡಿ.ಎನ್.ಯಶೋದಾ, ಸಹ ಶಿಕ್ಷಕರಾದ ಚಂದ್ರಕಲಾ, ಎನ್.ಎಂ.ನಾಗೇಶ್, ಅಬಿದಾ ಬಾನು, ಸವಿತಾ ಹಾಗೂ ಶಿಕ್ಷಕರು ಇದ್ದರು.