ಕೊಡ್ಲೂರು ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ(ಹೊಳೆ ಮಲ್ಲಪ್ಪ) ದೇವಾಲಯದಲ್ಲಿ ಆಯೋಜಿಸಿದ್ದ ಶಿವರಾತ್ರಿ ಪೂಜೋತ್ಸವದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಕಾರ್ಯದರ್ಶಿ ಕೆ.ಎನ್.ಪವನ್ ಕುಮಾರ್, ಈರಪ್ಪ, ರಾಜಾಚಾರಿ, ಕೃಷ್ಣ, ರಾಜು ಇತರರು ಇದ್ದರು.
ಕುಶಾಲನಗರ: ಕೂಡ್ಲೂರು ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ(ಹೊಳೆ ಮಲ್ಲಪ್ಪ) ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನೆರವೇರಿತು.
ಭಾನುವಾರ ಬೆಳಗ್ಗೆಯಿಂದ ದೇವಾಲಯದಲ್ಲಿ ಅಭಿಷೇಕ ಅರ್ಚನೆ ಪೂಜೆಗಳು ಜರುಗಿದವು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಅರ್ಚಕ ಯೋಗೇಶ್ ಪೂಜಾ ವಿಧಿ-ವಿಧಾನ ನೆರವೇರಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಕಾರ್ಯದರ್ಶಿ ಕೆ.ಎನ್.ಪವನ್ ಕುಮಾರ್, ಈರಪ್ಪ, ರಾಜಾಚಾರಿ, ಕೃಷ್ಣ, ರಾಜು ಇತರರು ಇದ್ದರು.