ಮಹಾ ಶಿವರಾತ್ರಿ ಅಂಗವಾಗಿ ಸಿದ್ದಾಪುರದ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಶಿವನಾಮ ಸ್ಮರಣೆಯೊಂದಿಗೆ ಶಿವರಾತ್ರಿ ಆಚರಣೆ ನಡೆಯಿತು.
ಸಿದ್ದಾಪುರ: ಮಹಾ ಶಿವರಾತ್ರಿ ಅಂಗವಾಗಿ ಸಿದ್ದಾಪುರದ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ ಭಕ್ತಿಭಾವದಿಂದ ನೆರವೇರಿತು. ಸೋಮವಾರ ಬೆಳಗ್ಗಿನಿಂದಲೇ ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಹಬ್ಬದ ಅಂಗವಾಗಿ ಶಿವಲಿಂಗಕ್ಕೆ ಕ್ಷೀರ, ಪಂಚಾಮೃತ, ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನಡೆಯಿತು. ಭಕ್ತರು ರಾತ್ರಿ ಜಾಗರಣೆ ನಡೆಸಿ ಶಿವನಿಗೆ ಪೂಜೆ ಸಲ್ಲಿಸಿದರು. ಶನಿವಾರದಿಂದಲೇ ಆರಂಭಗೊಂಡಿರುವ ವಿಶೇಷ ಪೂಜಾ ಕಾರ್ಯಗಳು ನಾಲ್ಕು ದಿನಗಳ ಕಾಲ ನಡೆಯಲಿದ್ದು, ಪ್ರತಿ ದಿನ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಜಳಕ, ಮಂಗಳವಾರ ಶುದ್ಧ ಕಳಸ ಕಾರ್ಯಕ್ರಮಗಳು ನಡೆಯಲಿವೆ. ಸುತ್ತಮುತ್ತಲ ಗ್ರಾಮಸ್ಥರು, ದೇವಾಲಯ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.