ನಾಪೋಕ್ಲು ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ ಕನ್ನಡ ರಾಜ್ಯೋತ್ಸದ ಕಾರ್ಯಕ್ರಮದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ನಾಯಕಿ ಬಾಳೆಯಡ ದಿವ್ಯ ಮಂದಪ್ಪ ಮತ್ತು ಅವರ ತಂಡವನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಂಶುಪಾಲೆ ಪಲ್ಲವಿ ಎಚ್.ಸಿ., ಟಿ.ಪಿ. ರಮೇಶ್ ಇತರರು ಇದ್ದರು. 
ಕೊಡಗು

ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಂಡಕ್ಕೆ ಸನ್ಮಾನ

ಪ್ರಮುಖ ಮುಖ್ಯಾಂಶಗಳು

  • ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಂಡಕ್ಕೆ ಸನ್ಮಾನ
ನಾಪೋಕ್ಲು: ಇಲ್ಲಿನ ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಂಡವನ್ನು ಅದರ ನಿಸ್ವಾರ್ಥ ಸೇವೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ ಕನ್ನಡ ರಾಜ್ಯೋತ್ಸದ ಕಾರ್ಯಕ್ರಮದಲ್ಲಿ ತಂಡದ ನಾಯಕಿ ಬಾಳೆಯಡ ದಿವ್ಯ ಮಂದಪ್ಪ ಮತ್ತು ಸದಸ್ಯರನ್ನು ಕಾಲೇಜಿನ ವತಿಯಿಂದ ಗಣ್ಯರು ಗೌರವಿಸಿದರು.
ಪ್ರಾಂಶುಪಾಲರಾದ ಪಲ್ಲವಿ ಎಚ್.ಸಿ. ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಧ್ಯಕ್ಷರು, ನಿವೃತ ಉಪ ಪ್ರಾಂಶುಪಾಲೆ ಕಾಂಡಂಡ ಉಷಾ ಜೋಯಪ್ಪ ಹಾಗೂ ಉಪನ್ಯಾಸಕರು ಸಿಬ್ಬಂದಿ ವರ್ಗ, ಮಕ್ಕಳು, ಸಿಬ್ಬಂದಿ ಉಪಸ್ಥಿತರಿದ್ದರು.