ವಿಘ್ನೇಶ್ವರ ಶಾಲಾ ವಾರ್ಷಿಕೋತ್ಸವವನ್ನು ಬಿಇಒ ಕೃಷ್ಣಪ್ಪ ಉದ್ಘಾಟನೆ ಮಾಡಿದರು. ಚಿತ್ರದಲ್ಲಿ ಪ್ರಕಾಶ್, ಲೋಕೇಶ್, ಭವಾನಿ ಗುರು, ಗೀತಾ ಹರೀಶ್, ಸಿಕೆ ದಿನೇಶ್ ಇದ್ದರು.
ಶನಿವಾರಸಂತೆ: ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಆತ್ಮ ವಿಶ್ವಾಸದ ಜತೆಯಲ್ಲಿ ಗುರಿ ಮತ್ತು ಛಲವಂತಿಕೆ ಇದ್ದಲ್ಲಿ ಸಾಧನೆಯ ಶಿಖರ ಏರಬಹುದು ಎಂದು ತುಮಕೂರು ತುರುವೇಕೆರೆಯ ಜೆ.ಪಿ.ವಿದ್ಯಾಸಂಸ್ಥೆಯ ಉಪನ್ಯಾಸಕ ಎಚ್.ಬಿ.ಪ್ರಕಾಶ್ ಅಭಿಪ್ರಾಯಪಟ್ಟರು.
ಶುಕ್ರವಾರ ಶನಿವಾರಸಂತೆಯ ಶ್ರೀವಿಘ್ನೇಶ್ವರ ವಿದ್ಯಾಸಂಸ್ಥೆಯ, ಶ್ರೀ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆ ಮತ್ತು ಬಾಲಕಿಯರ ಪ.ಪೂ.ಕಾಲೇಜು ಹಾಗೂ ಶ್ರೀ ವಿಘ್ನೇಶ್ವರ ಗೋಲ್ಡನ್ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಸಾಲಿನ ವಾರ್ಷಿಕೋತ್ಸವ ವಿಘ್ನೇಶ್ವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಕಾರ, ಗೌರವ, ಮಾನವಿಯತೆ ಮೌಲ್ಯಗಳ ಅಳವಡಿಕೆಯಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಗೊಳ್ಳುತ್ತದೆ. ಪಾಲಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗುತ್ತಾರೆ ಎಂದರು.
ಸಮಾಜದಲ್ಲಿ ವಿದ್ಯಾವಂತಿಕೆ, ಘನತೆ ಗೌರವ ಸಂಪಾದನೆಗಿಂತ ಮಾನವಿಯತೆಯ ಮೌಲ್ಯಗೆ ಹೆಚ್ಚಿನ ಬೆಲೆ ಸಿಗುತ್ತದೆ. ಈ ದೆಸೆಯಲ್ಲಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಷ್ಟೇ ಸಾಧನೆ ಮಾಡಿದರೂ ಮಾನವಿಯತೆಯ ಮೌಲ್ಯವನ್ನು ಮಾತ್ರ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳಿಸಲು ಪ್ರಯತ್ನಿಸುವ ಮೂಲಕ ಋಣಾತ್ಮಕ ಶಿಕ್ಷಣ ನೀಡಬೇಕು ಎಂದರು. ಇಂದು ಖಾಸಗಿ ಶಾಲೆಗಳು ಹೆಚ್ಚಾಗುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕೊರತೆ ಎದುರಾಗುತ್ತಿದೆ. ಈ ದೆಸೆಯಲ್ಲಿ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗೆ ಸಂಯೋಜನೆಗೊಂಡರೆ ಸರ್ಕಾರಿ ಮತ್ತು ಖಾಸಗಿ ಶಾಲೆ ಎಂಬ ವ್ಯತ್ಯಾಸ ದೂರವಾಗುತ್ತದೆ. ಹಾಜರಾತಿ ಪ್ರಮಾಣವು ಹೆಚ್ಚಾಗುತ್ತದೆ ಎಂದರು.
ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಬಿ.ಲೋಕೇಶ್, ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಭವಾನಿ ಗುರು, ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಗೀತಾ ಹರೀಶ್, ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರತ್ನಾಕರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್, ದುಂಡಳ್ಳಿ ಗ್ರಾ.ಪಂ.ಸದಸ್ಯರಾದ ಎಸ್.ಪಿ.ಭಾಗ್ಯಾ, ಮನು, ನಿತಿನ್, ವಿಘ್ನೇಶ್ವರ ವಿದ್ಯಾಸಂಸ್ಥೆ ಉಪಾಧ್ಯಕ್ಷ ಕೃಷ್ಣರಾಜು, ಕಾರ್ಯದರ್ಶಿ ಬೆಳ್ಯಪ್ಪ, ನಿರ್ದೇಶಕರಾದ ಗೋವಿಂದೇಗೌಡ, ದೇವರಾಜ್, ನಿತ್ಯನಿಧಿ, ಸೀತಮ್ಮ, ಪ.ಪೂ.ಕಾಲೇಜು ಪ್ರಾಂಶುಪಾಲ ಶಿವಪ್ರಕಾಶ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಚಿತ್ರಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಷಣ್ಮುಖ ಪ್ರಮುಖರಾದ ಎಸ್.ಬಿ.ಯಶೋದಾ, ನಿವೃತ್ತ ಶಿಕ್ಷಕ ವಿಶ್ವನಾಥ್ ಇದ್ದರು.