ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಶ್ರೀ ಶನೇಶ್ವರ ಜಯಂತಿ ಮತ್ತು ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನ ಸಮಿತಿಯ ವತಿಯಿಂದ ಶ್ರೀ ಶನೇಶ್ವರ ಜಯಂತಿ ಮತ್ತು ರಥೋತ್ಸವವು ವಿವಿಧ ಹೋಮ ಹವನಗಳೊಂದಿಗೆ ಶನಿವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಜಯಂತಿ ಅಂಗವಾಗಿ ಸ್ವಸ್ತಿಶೀ ಪಂಚಗವ್ಯ ಪುಣ್ಯಾಹ ವಾಚನ ಗಣಯಾಗ, ಸಗ್ರಹಾಮಕ ಶಾಂತಿ ಹೋಮ, ನವಕಕಲಶಾರಾಧನೆ, ಪ್ರಧಾನ ಹೋಮ್, ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾಕುಂಭಾಭಿಷೇಕ ,ಪ್ರಸನ್ಯ ಪೂಜೆ, ಶನಿಶಾಂತಿ ಹೋಮದ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನೆರವೇರಿತು. ಪೂಜಾ ಕೈಂಕರ್ಯಗಳನ್ನು ಉಜ್ಜರೆಯ ಗೋಪಾಲ ತಂಡದವರು ನೆರವೇರಿಸಿದರು.
ಸಂಜೆ 4 ಗಂಟೆಗೆ ವಿವಿಧ ಬಗೆಯ ಹೂ, ಮತ್ತು ಕೇಸರಿ ಬಟ್ಸಿಂಗ್ಸ್ ನಿಂದ ಸಿಂಗರಗೊAಡಿದ ಸ್ವಾಮಿಯ ರಥೋತ್ಸದಲ್ಲಿ ಶ್ರೀ ಸ್ವಾಮಿ ವಿಗ್ರಹವನ್ನು ಕುಳ್ಳಿರಿಸಿ ಪ್ರಮುಖ ಬೀದಿಗಳಲ್ಲಿ ವೈಭವದ ಮೆರವಣಿ ಸಾಗಿ, ನಂತರ ಹಾರಂಗಿ ನದಿಗೆ ತೆರಳಿ ಅಲ್ಲಿ ಶ್ರೀ ಸ್ವಾಮಿ ಗಂಗಾಪೂಜೆ ನೆರವೇರಿಸಿ ನಂತರ ಸ್ವ ಸ್ಧಾನ ದೇವಾಲಯಕ್ಕೆ ಬರಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರಾದ ಎಸ್.ಆರ್. ಸುನಿಲ್ ರಾವ್, ಕರ್ನಾಟಕ ರಾಜ್ಯ ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಎಸ್.ಆರ್. ಅರುಣ್ ರಾವ್ ಸೇರಿದಂತೆ ಕುಟುಂಬದ ಸದಸ್ಯರು, ಕೂಡಿಗೆ, ಕುಶಾಲನಗರ, ಮಲ್ಲೆನಹಳ್ಳಿ, ಸೀಗೆಹೊಸೂರು ಸೇರಿದಂತೆ ಸುತ್ತಮುಲ್ಲಿನ ಭಕ್ತರು ಆಗಮಿಸಿದ್ದರು.