ವರುಣ್ 
ಕೊಡಗು

ಚೆಸ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಪ್ರಜ್ವಲ್.ಎನ್
ಶನಿವಾರಸಂತೆ: ಇತ್ತೀಚೆಗೆ ಮಡಿಕೇರಿಯ ಸಂತ ಜೋಸೆಫ್ ಶಾಲೆಯಲ್ಲಿ ನಡೆದ ಕೊಡಗು ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಶನಿವಾರಸಂತೆ ಕಾವೇರಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಆರ್.ಪಿ.ವರುಣ್ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಈತ ಶನಿವಾರಸಂತೆ ನಿವಾಸಿ ಆರ್.ಸಿ.ಪಾಲಾಕ್ಷ ಮತ್ತು ಎಂ.ಸಿ.ಕವಿತಾ ದಂಪತಿ ಪುತ್ರ ಎಂದು ವಿದ್ಯಾಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.