ಸೋಮವಾರಪೇಟೆ: 15 ವರ್ಷದೊಳಗಿನ ರಾಷ್ಟ್ರೀಯ ಸಬ್ ಜೂನಿಯರ್ ಹಾಕಿ ಟೂರ್ನಿಗೆ ಕರ್ನಾಟಕ ರಾಜ್ಯ ತಂಡಕ್ಕೆ ಕೊಡಗು ಜಿಲ್ಲೆಯ ಡಿ.ಕೃಪಾಂಕ್ ಆಯ್ಕೆಯಾಗಿದ್ದಾರೆ.
ಏ.1 ರಿಂದ 12 ರವರೆಗೆ ಬಿಹಾರದ ರಾಜ್‌ಗಿರ್‌ನಲ್ಲಿ ಟೂರ್ನಿ ನಡೆಯಲಿದೆ. ಕೃಪಾಂಕ್ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ಜೀತುಶ್ರೀ ಹಾಗೂ ದೃವೀಣ್ ದಂಪತಿಯ ಪುತ್ರನಾಗಿದ್ದು, ಪೊನ್ನಂಪೇಟೆಯ ಅಪ್ಪಚ್ಚ ಕವಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ.