ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ 2025-26ನೇ ಸಾಲಿನ ರಾಜ್ಯ ಮಟ್ಟದ ಕರಾಟೆ ಪಂದ್ಯದಲ್ಲಿ ಭಾಗವಹಿಸಿ ವಿಜೇತರಾಗಿ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆಯಾದ ಕುಶಾಲನಗರದ ಫಾತಿಮಾ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು. ತರಬೇತುದಾರ ಸಂಕೇತ್ ಇದ್ದರು. 
ಕೊಡಗು

ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಸುನಿಲ್ ಪೊನ್ನೇಟಿ
ಕುಶಾಲನಗರ:
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ನ.9 ಮತ್ತು 10 ರಂದು ನಡೆದ 2025-26ನೇ ಸಾಲಿನ ರಾಜ್ಯ ಮಟ್ಟದ ಕರಾಟೆ ಪಂದ್ಯದಲ್ಲಿ ಕುಶಾಲನಗರದ ಫಾತಿಮಾ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
17 ವರ್ಷದ ಬಾಲಕರ ಸ್ಪರ್ಧೆಯಲ್ಲಿ 45 ಕೆ.ಜಿ. ವಿಭಾಗದಲ್ಲಿ ಪಿ.ಆರ್. ಮುಕುಂದ, 40 ಕೆ.ಜಿ. ವಿಭಾಗದಲ್ಲಿ ಬ್ರಿಜೇಶ್, 14 ವರ್ಷದ ಬಾಲಕರ ಸ್ಪರ್ಧೆಯಲ್ಲಿ ಯೂನಿಕ್ ಅಕಾಡೆಮಿಯ ವಿಸೃತ್ ವರದರಾಜ್ 25 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
50 ಕೆ.ಜಿ. ವಿಭಾಗದಲ್ಲಿ ಪ್ರಣಿತ ನಾಯಕ್, ಹಿತೇಶ್, 56 ಕೆ.ಜಿ. ವಿಭಾಗದಲ್ಲಿ ಕುಲದೀಪ್, ಬೆಳ್ಳಿ ಪದಕ 36 ಕೆ.ಜಿ. ವಿಭಾಗದಲ್ಲಿ ರಶ್ಮಿ, 30 ಕೆ.ಜಿ.ವಿಭಾಗದಲ್ಲಿ ಭವಿಸ್ ಸುಬ್ಬಯ್ಯ, 26 ಕೆ.ಜಿ. ವಿಭಾಗದಲ್ಲಿ ದಕ್ಷ ಕಂಚಿನ ಪದಕ ಪಡೆದಿದ್ದಾರೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ತರಬೇತುದಾರ ಸಂಕೇತ್ ಮಾರ್ಗದರ್ಶನದಲ್ಲಿ ಮಕ್ಕಳು ಈ ಸಾಧನೆ ಮಾಡಿದ್ದಾರೆ.