ಮುತ್ತಪ್ಪ ಹಾಗೂ ತಿರುವಪ್ಪ ಗುಳಿಗನಕೋಲ  
ಕೊಡಗು

ತೆರೆ ಮಹೋತ್ಸವ ಸಂಪನ್ನ

ರವಿಕುಮಾರ್ ಪಿ. ಕೆ
ಸುಂಟಿಕೊಪ್ಪ: ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ತೆರೆ ಮಹೋತ್ಸವ ಸೋಮವಾರ ಸಂಪನ್ನಗೊಂಡಿತು.
ಶನಿವಾರ ಧ್ವಜಾರೋಹಣದೊಂದಿಗೆ ಆರಂಭಗೊಂಡ ತೆರೆ ಮಹೋತ್ಸವವು ಸೋಮವಾರ ಮಧ್ಯಾಹ್ನ ವಿವಿಧ ಕೋಲಗಳು ಸೇರಿದಂತೆ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಾವುಟವನ್ನು ಇಳಿಸುವುದರೊಂದಿಗೆ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ಮಹೋತ್ಸವಕ್ಕೆ ತೆರೆಬಿದ್ದಿತು.
ತೆರೆ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪ ಹಾಗೂ ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಲಾಗಿತ್ತು. ಶನಿವಾರ ಬೆಳಗ್ಗೆ ಅರ್ಚಕ ವಿನಯಕುಮಾರ್ ಬಾವುಟವನ್ನು ಏರಿಸುವುದರೊಂದಿಗೆ ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಸಂಜೆ 4 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ರಾತ್ರಿ 6 ಗಂಟೆಗೆ ಚಂಡೆಮೇಳ, 7 ಗಂಟೆಗೆ ಶ್ರೀಮುತ್ತಪ್ಪ ವೆಳ್ಳಾಟಂ ನಡೆಯಿತು.
ಭಾನುವಾರ ಬೆಳಗ್ಗೆ 7 ಗಂಟೆಗೆ ವಾದ್ಯಮೇಳ, 11ಗಂಟೆಗೆ ಶ್ರೀ ಶಾಸ್ತಪ್ಪನ ವೆಳ್ಳಾಟಂ, ಮಧ್ಯಾಹ್ನ 1 ಗಂಟೆಗೆ ಶ್ರೀ ಗುಳಿಗವೆಳ್ಳಾಟಂ, ಸಂಜೆ 4 ಗಂಟೆಗೆ ಅಡಿಯರ ವಿದ್ಯುತ್ ದೀಪಾಲಂಕೃತ ಭವ್ಯ ಮಮಟಪದಲ್ಲಿ ಶ್ರೀ ಮುತ್ತಪ್ಪ ಹಾಗೂ ತಿರುವಪ್ಪ ಮೂರ್ತಿಗಳನ್ನು ಇರಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಚಂಡೆಯೊಂದಿಗೆ ಮೆರವಣಿಗೆಯು ಸಾಗಿತು. ರಾತ್ರಿ 7 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, 8 ಗಂಟೆಗೆ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ರಕ್ತ ಚಾಮುಂಡಿ ವೆಳ್ಳಾಟಂ, 8.30 ಗಂಟೆಗೆ ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡುವುದು, 9ಕ್ಕೆ ವಿಷ್ಣುಮೂರ್ತಿ ವೆಳ್ಳಾಟಂ, 11ಕ್ಕೆ ಕಳಿಗ ಪಾಟ್ ಅಂದಿವೇಳ ಕಳಸಂ ಸ್ವೀಕರಿಸುವುದು, ವೆಳ್ಳಕಟ್ಟ್, 1.15ಕ್ಕೆ ಗುಳಿಗನ ಕೋಲ, 2ಕ್ಕೆ ಶಾಸ್ತಪ್ಪನ ಕೋಲ, ಬೆಳಗಿನ ಜಾವ 4ಕ್ಕೆ ಶ್ರೀಮುತ್ತಪ್ಪ ಮತ್ತು ಶ್ರೀ ತಿರುವಪ್ಪನ ಕೋಲಗಳು ನಡೆದವು.
ಸೋಮವಾರ ಬೆಳಗ್ಗೆ 7ಕ್ಕೆ ಶ್ರೀ ರಕ್ತ ಚಾಮುಂಡಿಕೋಲ, 8ಕ್ಕೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ಪಳ್ಳಿವೇಟ, 9ಕ್ಕೆ ಶ್ರೀ ವಿಷ್ಣುಮೂರ್ತಿಕೋಲ, 10ಕ್ಕೆ ಶ್ರೀ ಚಾಮುಂಡೇಶ್ವರಿ ಕೋಲ, 11ಕ್ಕೆ ಶ್ರೀ ವಸೂರಿ ಮಾಲೆ ಕೋಲ, 11.30 ಗಂಟೆಗೆ ಗುರುಶ್ರೀ ದರ್ಪಣ, ಮಧ್ಯಾಹ್ನ 12ಕ್ಕೆ ಬಾವುಟವನ್ನು ಇಳಿಸಲಾಯಿತು.
ಸಮಿತಿಯ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಉಪಾಧ್ಯಕ್ಷ ಯಂಕನ ಶ್ರೀ ರಾಮ್, ಬಿ.ಡಿ.ರಾಜುರೈ, ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋಹನ್, ಖಜಾಂಚಿ ರಮೇಶ್‌ಪಿಳ್ಳೆ, ಸಹಕಾರ್ಯದರ್ಶಿ ಯಂಕನ ಕೌಶಿಕ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ್ ಗೋಪಿ, ಸುದೀಶ್, ಚಂದು ಸುರೇಶ್, ಧನುಕಾವೇರಪ್ಪ, ಎಂ.ಎಸ್.ಸುನಿಲ್, ಚಂದ್ರ, ಪ್ರವೀಣ, ದಿವಾಕರ ರೈ, ವಿನೋದ್, ಪ್ರಾಂತ್, ಎ.ಲೋಕೇಶ್ ಕುಮಾರ್, ಎ.ಶ್ರೀಧರ್ ಕುಮಾರ್, ಮನು ರೈ (ಮಹೇಶ್), ಸಲಹಾ ಸಮಿತಿ ಸದ್ಯರಾದ ಕೆ.ಪಿ.ಜಗನ್ನಾಥ್, ವೀಣಾರೈ, ಗಿರಿಜಾ ಉದಯಕುಮಾರ್ ಹಾಗೂ ರಮ್ಯಾ ಮೋಹನ್ ಸೇರಿದಂತೆ ಸಮಿತಿ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.