ಒಲಿಂಪಿಯಾಡ್ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. 
ಕೊಡಗು

ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣೆ

ರವಿಕುಮಾರ್ ಪಿ. ಕೆ
ಸಿದ್ದಾಪುರ: ಒಲಿಂಪಿಯಾಡ್ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಹಾಗೂ ಪ್ರಮಾಣಪತ್ರವನ್ನು ಇತ್ತೀಚೆಗೆ ವಿತರಿಸಲಾಯಿತು.
ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ.ಟ್ರಸ್ಟ್) ಯೋಜನಾ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕ ವಿಠಲ್ ಶಾಲಿಯನ್ ಹಾಗೂ ಸಿಎಸ್‌ಸಿ ಯೋಜನಾಧಿಕಾರಿ ದಿಲೀಪ್ ಕುಮಾರ್ ಜೈನ್ ಉದ್ಘಾಟಿಸಿದರು.
ಕೇಂದ್ರ ಸರ್ಕಾರದ ಐಟಿ ಸಚಿವಾಲಯದ ಅಧೀನದಲ್ಲಿ ಸಿಎಸ್‌ಸಿ ಇ-ಗವರ್ನೆನ್ಸ್ ಮೂಲಕ ನಡೆಸಲಾದ ಒಲಿಂಪಿಯಾಡ್ ಪರೀಕ್ಷೆಗೆ ನೋಂದಾಯಿಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಒಲಿಂಪಿಯಾಡ್ ಪರೀಕ್ಷೆಯ ಸಾಮಾನ್ಯ ಜ್ಞಾನ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ರ‌್ಯಾಂಕ್ ಪಡೆದು 20 ಸಾವಿರ ರೂ. ಸ್ಕಾಲರ್‌ಶಿಪ್‌ಗೆ ಅರ್ಹರಾದ ಸುಂಟಿಕೊಪ್ಪ ವಲಯದ ಕಾನ್ಬೈಲ್ ಕಾರ್ಯಕ್ಷೇತ್ರದ ವಿದ್ಯಾರ್ಥಿ ಕೃತಿಕ್ ಅವರನ್ನು ಸನ್ಮಾನಿಸಲಾಯಿತು.
ಎಂಐಎಸ್ ಯೋಜನಾಧಿಕಾರಿ ಪ್ರವೀಣ್, ಯೋಜನಾಧಿಕಾರಿ ಪುರುಷೋತ್ತಮ್, ಹಣಕಾಸು ಪ್ರಬಂಧಕಿ ದೀಪ್ತಿ, ನಗದು ಮೇಲ್ವಿಚಾರಕಿ ದಾಕ್ಷಾಯಿಣಿ, ತಾಲೂಕು ನೋಡಲ್ ಅಧಿಕಾರಿ ದರ್ಶನ್ ಹಾಗೂ ಮಡಿಕೇರಿ ತಾಲೂಕಿನ ಸಿಎಸ್‌ಸಿ ಸೇವಾದಾರರು ಉಪಸ್ಥಿತರಿದ್ದರು.