ಕೂಡಿಗೆ ಸಂಜೀವಿನಿ ಒಕ್ಕೂಟ ವತಿಯಿಂದ ಕೂಡಿಗೆ ಗಣಪತಿ ಪೆಂಡಾಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಜೀವಿನಿ ಸಂತೆ ಮೇಳದಲ್ಲಿ ಮಾರಾಟಕ್ಕೆ ಇಟ್ಟಿದ್ದ ವಿವಿಧ ವಸ್ತುಗಳು ಗಮನ ಸೆಳೆದವು. 
ಕೊಡಗು

ಕೂಡಿಗೆ ಗ್ರಾಮದಲ್ಲಿ ಸಂಜೀವಿನಿ ಸಂತೆ ಮೇಳ

ಕುಶಾಲನಗರ: ಕುಶಾಲನಗರ ತಾಲೂಕು ಪಂಚಾಯಿತಿ, ಕೂಡಿಗೆ ಗ್ರಾಮ ಪಂಚಾಯಿತಿ, ಕೂಡಿಗೆ ಸಂಜೀವಿನಿ ಒಕ್ಕೂಟ ವತಿಯಿಂದ ಕೂಡಿಗೆ ಗಣಪತಿ ಪೆಂಡಾಲ್ ಸಭಾಂಗಣದಲ್ಲಿ ಮಂಗಳವಾರ ಸಂಜೀವಿನಿ ಸಂತೆ ಮೇಳ ಆಯೋಜಿಸಲಾಗಿತ್ತು.
ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಳಾ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಸಂತೆ ಮೇಳಗಳು ನಡೆಸುವ ಮೂಲಕ ಮಹಿಳೆಯರು ಅರ್ಥಿಕ ವ್ಯವಹಾರ ಜ್ಞಾನದ ಜತೆಯಲ್ಲಿ ಅರ್ಥಿಕವಾಗಿ ಮುಂದುವರಿಯಲು ಸಹಾಯವಾಗುತ್ತದೆ. ಅರ್ಥಿಕ ಸಬಲೀಕರಣಕ್ಕೂ ಕಾರಣವಾಗುತ್ತದೆ. ಸ್ವಉದ್ಯೋಗವನ್ನು ಆರಂಭಿಸಿ ಸಾಲಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಸಂಜೀವಿನಿ ಯೋಜನೆಯಡಿ ಗೃಹೋಪಯೋಗಿ ವಸ್ತುಗಳು, ಕರಕುಶಲ ವಸ್ತುಗಳ ತಯಾರಿಸುವ ಮೂಲಕ ಯೋಜನೆಯ ಸವಲತ್ತು ಪಡೆದು ಸಬಲರಾಗಬೇಕು ಎಂದರು.
ಕೂಡಿಗೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಲ್ಪನಾ, ಬಸವೇಶ್ವರ ದಂಡಿನಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಪ್ರಕಾಶ್, ಸಂಜೀವಿನಿ ಯೋಜನೆಯ ತಾಲೂಕು ಮಟ್ಟದ ಸಿಬ್ಬಂದಿ ಜಯಚಂದ್ರನ್, ಪದ್ಮಶ್ರೀ, ಮಮತಾ, ಒಕ್ಕೂಟದ ಸದಸ್ಯರಾದ ರತ್ನಮ್ಮ, ಸೌಮ್ಯಾ, ಮಾನಸಾ, ಗ್ರಾಮದ ಪ್ರಮುಖರಾದ ಗೋವಿಂದರಾಜ್, ಅನಿಲ್, ಲೋಕೇಶ್ ಇತರರು ಇದ್ದರು.