ಕೂಡಿಗೆ ಸಂಜೀವಿನಿ ಒಕ್ಕೂಟ ವತಿಯಿಂದ ಕೂಡಿಗೆ ಗಣಪತಿ ಪೆಂಡಾಲ್ ಸಭಾಂಗಣದಲ್ಲಿ ನಡೆದ ಸಂಜೀವಿನಿ ಸಂತೆ ಮೇಳದಲ್ಲಿ ಮಾರಾಟಕ್ಕೆ ಇಟ್ಟಿದ್ದ ವಿವಿಧ ವಸ್ತುಗಳು ಗಮನ ಸೆಳೆದವು
ಕುಶಾಲನಗರ ತಾಲೂಕು ಪಂಚಾಯತಿ, ಕೂಡಿಗೆ ಗ್ರಾಮ ಪಂಚಾಯತಿ, ಕೂಡಿಗೆ ಸಂಜೀವಿನಿ ಒಕ್ಕೂಟ ವತಿಯಿಂದ ಕೂಡಿಗೆ ಗಣಪತಿ ಪೆಂಡಾಲ್ ಸಭಾಂಗಣದಲ್ಲಿ ಮಂಗಳವಾರ ಸಂಜೀವಿನಿ ಸಂತೆ ಮೇಳ ಕಾರ್ಯಕ್ರಮ ನಡೆಯಿತು.
ಕೂಡಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜಳಾ ಕಾರ್ಯಕ್ರಮದ ಉದ್ಘಾಟಿಸಿದರು. ನಂತರ ಮಾತಾನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಸಂತೆ ಮೇಳಗಳು ನಡೆಯುವ ಮೂಲಕ ಮಹಿಳೆಯರು ಅರ್ಥಿಕ ವ್ಯವಹಾರ ಜ್ಞಾನದ ಜತೆಯಲ್ಲಿ ಅರ್ಥಿಕವಾಗಿ ಮುಂದುವರೆಯಲು ಸಹಾಯವಾಗುತ್ತದೆ. ಅರ್ಥಿಕ ಸಬಲೀಕರಣಕ್ಕೂ ಕಾರಣವಾಗುತ್ತದೆ. ಸ್ವ- ಉದ್ಯೋಗವನ್ನು ಆರಂಭಿಸಿ ಸಾಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಸಂಜೀವಿನಿ ಯೋಜನೆಯ ಅಡಿಯಲ್ಲಿ ತಮ್ಮ ಮನೆಗಳಲ್ಲಿ ಗೃಹೋಪಯೋಗಿ ವಸ್ತುಗಳು, ಕರಕುಶಲ ವಸ್ತುಗಳ ತಯಾರಿಸುವ ಮೂಲಕ ಯೋಜನೆಯ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದರು.
ಕೂಡಿಗೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಲ್ಪನಾ, ಬಸವೇಶ್ವರ ದಂಡಿನಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಪ್ರಕಾಶ್, ಸಂಜೀವಿನಿ ಯೋಜನೆಯ ತಾಲೂಕು ಮಟ್ಟದ ಸಿಬ್ಬಂದಿ ಜಯಚಂದ್ರನ್, ಪದ್ಮಶ್ರೀ, ಮಮತಾ, ಒಕ್ಕೂಟದ ಸದಸ್ಯರಾದ ರತ್ನಮ್ಮ, ಸೌಮ್ಯ, ಮಾನಸ, ಗ್ರಾಮದ ಪ್ರಮುಖರಾದ ಗೋವಿಂದರಾಜ್, ಅನಿಲ್, ಲೋಕೇಶ್ ಮತ್ತಿತರರು ಇದ್ದರು.