ದುಂಡಳ್ಳಿ ಗ್ರಾಪಂನಿಂದ ನಿರ್ಮಿಸಿರುವ ಸಂಜೀವಿನಿ ಸಭಾಂಗಣವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.
ಶನಿವಾರಸಂತೆ: ರಾಜ್ಯದಲ್ಲೆ ರೈಲ್ವೆ ಸಂಪರ್ಕ ಇಲ್ಲದಿರುವ ಕೊಡಗಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಸಮಯ ಸಮೀಪಿಸುತ್ತಿದೆ ಎಂದು ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ವಿವಿಧ ಇಲಾಖೆ ಅನುದಾನದಲ್ಲಿ 17.30 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸಂಜೀವಿನಿ ಸಭಾಂಗಣ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂನಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸಿರುವುದು ಶ್ಲಾಘನೀಯ. ಸಭಾಂಗಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನನ್ನ ಅಧಿಕಾರದ ಅವಧಿಯಲ್ಲಿ ಮೈಸೂರಿನಿಂದ-ಕೊಡಗಿನ ಕುಶಾಲನಗರದವರೆಗೆ ರೈಲು ಸಂಪರ್ಕ ಕಲ್ಪಿಸಿಕೊಡಬೇಕು ಎಂಬ ವಿಶ್ವಾಸ ಇಟ್ಟುಕೊಂಡಿದ್ದೇನೆ. ಕೊಡಗಿಗೆ ಸಂಸದರ ಅನುದಾನವನ್ನು ನೀಡುವ ಮೂಲಕ ಜಿಲ್ಲೆಯ ಪ್ರಗತಿಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ದುಂಡಳ್ಳಿ ಗ್ರಾಪಂ ಅಧ್ಯಕ್ಷೆ ಭವಾನಿ ಗುರುಪ್ರಸಾದ್, ಉಪಾಧ್ಯಕ್ಷೆ ಗೋಪಿಕಾ ಹರೀಶ್, ಸದಸ್ಯರಾದ ಡಿ.ಪಿ.ಬೋಜಪ್ಪ, ಸಿ.ಜೆ.ಗಿರೀಶ್, ಪೂರ್ಣಿಮಾ ಕಿರಣ್, ಸತ್ಯವತಿ ದೇವರಾಜ್, ಎಸ್.ಪಿ.ಭಾಗ್ಯಾ, ನಿತಿನ್, ಎಂ.ಡಿ.ದೇವರಾಜ್, ಜಾನಕಿ ಸುಬ್ರಹ್ಮಣ್ಯ, ಮನು ಮಹಾಂತೇಶ್, ಎಸ್.ಪಿ.ಕಾಂತರಾಜ್, ನಂದಿನಿ ನಂದೀಶ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಕೆ.ಆಯಿಷಾ ಹಾಜರಿದ್ದರು.