ರಾಷ್ಟಿçÃಯ ಹೆದ್ದಾರಿ ೨೭೫ರ ಕರ್ತೋಜಿಯಲ್ಲಿ ಪೂರ್ಣಗೊಂಡಿರುವ ತಡೆಗೋಡೆ  
ಕೊಡಗು

ಸಂಪಾಜೆ-ಕುಶಾಲನಗರ ಮಾರ್ಗ ಸುರಕ್ಷಿತ

ಮಡಿಕೇರಿ:
ರಾಜ್ಯದ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿರುವ ರಾಷ್ಟಿçÃಯ ಹೆದ್ದಾರಿ ೨೭೫ರ ಸಂಪಾಜೆ-ಕುಶಾಲನಗರ ಮಾರ್ಗದಲ್ಲಿ ಈ ಮಳೆಗಾಲದ ಸಂಚಾರ ಬಹುತೇಕ ಸುರಕ್ಷಿತವಾಗಿರುವ ನಿರೀಕ್ಷೆ ಮೂಡಿಸಿದೆ. ವಾಹನ ಸವಾರರ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದ ಕರ್ತೋಜಿ ಎಂಬಲ್ಲಿ ಆಧುನಿಕ ಮಾದರಿಯಲ್ಲಿ ತಡೆಗೋಡೆ ನಿರ್ಮಾಣ ಆಗಿದ್ದು, ಗುಡ್ಡ ಕುಸಿತದ ಆತಂಕ ದೂರವಾಗಿದೆ. ಮತ್ತೊಂದು ಕಡೆ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಯ ಮರು ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ.
ಕೊಡಗನ್ನು ಬಂದರು ನಗರಿ ಮಂಗಳೂರಿಗೆ ಸಂಪರ್ಕಿಸುವ ರಾಷ್ಟಿçÃಯ ಹೆದ್ದಾರಿ ೨೭೫ರ ಸಂಪಾಜೆ-ಕುಶಾಲನಗರ ಮಾರ್ಗ ಎಲ್ಲಾ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿರುವ ರಸ್ತೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಕಾಫಿ ರಫ್ತು ಮಾಡಲು ಇದೇ ಹೆದ್ದಾರಿ ಬಳಕೆ ಆಗುತ್ತದೆ. ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಕ್ಷೇತ್ರಗಳು, ಪ್ರವಾಸ ಹೀಗೆ ವಿವಿಧ ರೀತಿಯಲ್ಲಿ ಈ ಮಾರ್ಗ ಕೊಡಗು, ದಕ್ಷಿಣ ಕನ್ನಡ ಮಾತ್ರವಲ್ಲದೆ ಅಕ್ಕಪಕ್ಕದ ಉಳಿದ ಜಿಲ್ಲೆಗಳಿಗೂ ಹೆಚ್ಚು ಪ್ರಯೋಜನಕಾರಿ ಆಗಿದೆ. ಸಂಪಾಜೆ ಘಾಟ್ ರಸ್ತೆ ಎಂದೇ ಗುರುತಿಸಲಾಗುವ ಈ ಮಾರ್ಗ ರಾಜ್ಯದ ಅಪಾಯಕಾರಿ ಮಾರ್ಗಗಳಲ್ಲಿ ಒಂದು ಎಂದು ಕೂಡ ಗುರುತಿಸಲಾಗುತ್ತದೆ.
೨೦೧೮ರ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೆದಕಲ್‌ನಿಂದ ಕೊಯನಾಡು ತನಕ ಈ ಹೆದ್ದಾರಿಯಲ್ಲಿ ಅಲ್ಲಲ್ಲಿ ಬರೆ ಕುಸಿದ ಕಾರಣ ತಿಂಗಳುಗಳ ಕಾಲ ಸಂಪರ್ಕ ಕಡಿತ ಆಗಿತ್ತು. ನಂತರದ ದಿನಗಳಲ್ಲಿ ಪ್ರತಿ ಮಳೆಗಾಲವೂ ಇಲ್ಲಿ ಆತಂಕದಿAದಲೇ ಸಂಚರಿಸುವ ವಾತಾವರಣ ನಿರ್ಮಾಣ ಆಗಿತ್ತು. ತಾತ್ಕಾಲಿಕ ದುರಸ್ತಿ ಕಾರ್ಯಗಳು ನಡೆಯುತ್ತಿದ್ದರೂ ಜೋರು ಮಳೆಯ ಸಂದರ್ಭ ಇಲ್ಲಿ ಸಂಚಾರ ಸುರಕ್ಷಿತ ಅಲ್ಲ ಎನ್ನುವ ಭಾವನೆ ಜನರಲ್ಲಿ ಮನೆ ಮಾಡಿತ್ತು. ಅಲಲ್ಲಿ ಅಪಘಾತ ವಲಯಗಳನ್ನೂ ಗುರುತಿಸಲಾಗಿತ್ತು.
ಕರ್ನಾಟಕದ ಅತ್ಯಂತ ಜನನಿಬಿಡ ಹೆದ್ದಾರಿಗಳಲ್ಲಿ ಒಂದಾದ ರಾಷ್ಟಿçÃಯ ಹೆದ್ದಾರಿ ೨೭೫ರ ಬಂಟ್ವಾಳ-ಬೆAಗಳೂರು ವಿಭಾಗದಲ್ಲಿ ಸಂಪಾಜೆಯಿAದ ಕುಶಾಲನಗರ ತನಕ ರಸ್ತೆಯಲ್ಲಿ ಹೆದ್ದಾರಿ ಸುರಕ್ಷತೆಯ ಕಾಮಗಾರಿಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ೯೪.೦೮ ಕೋಟಿ ರೂ. ಬಳಸಿಕೊಂಡು
ಮಳೆಗಾಲದಲ್ಲಿ ಪದೇ ಪದೇ ಭೂಕುಸಿತಕ್ಕೆ ಒಳಗಾಗುವ ಬಂಟ್ವಾಳ ಮತ್ತು ಮೈಸೂರು ನಡುವಿನ ಈ ಘಟ್ಟ ಪ್ರದೇಶದ ರಸ್ತೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು ೭೮ನೇ ಕಿಮೀನಿಂದ ೧೨೫ನೇ ಕಿಮೀ ತನಕದ ಸಂಪಾಜೆಯಿAದ ಕುಶಾಲನಗರ ವ್ಯಾಪ್ತಿಯಲ್ಲಿ ಸುರಕ್ಷತಾ ಕಾಮಗಾರಿ ನಡೆಸಲಾಗುತ್ತಿದೆ. ಈ ಕಾಮಗಾರಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದ್ದರು.
ಈ ಮಹತ್ವದ ೨೧ ಕಾಮಗಾರಿಗಳ ಪೈಕಿ ಅತೀ ಸೂಕ್ಷö್ಮ ಪ್ರದೇಶದಲ್ಲಿ ೧೨ ತಡಗೋಡೆಗಳ ನಿರ್ಮಾಣ ಕಾರ್ಯಗಳನ್ನು ಮೊದಲ ಹಂತದಲ್ಲಿ ಕೈಗೊಳ್ಳಲಾಗಿದೆ. ಪದೇ ಪದೇ ಭೂಕುಸಿತ ಆಗುವ ಮೂಲಕ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಸ್ಥಳಗಳಲ್ಲಿ ಮಳೆಗಾಲ ಶುರುವಾಗುವ ಮೊದಲು ಕಾಮಗಾರಿ ಮುಗಿಸುವ ಉದ್ದೇಶ ಹೊಂದಿದ್ದ ಇಲಾಖೆ ಕರ್ತೋಜಿಯಲ್ಲಿ ತಡೆಗೋಡೆ ಕೆಲಸ ಪೂರ್ಣಗೊಳಿಸಿದೆ. ಇಲ್ಲಿ ಪ್ರತಿ ಮಳೆಗಾಲದಲ್ಲೂ ಮಣ್ಣಿನ ಚಲನೆಯಿಂದ ರಸ್ತೆ ಕಿತ್ತು ಬರುತ್ತಿತ್ತು. ಹಾಗಾಗಿ ಮಳೆಗಾಲದಲ್ಲಿ ಇಲ್ಲಿ ಕಾಯಂ ಆಗಿ ಒಂದು ಜೆಸಿಬಿಯನ್ನು ನಿಲ್ಲಿಸಲಾಗುತ್ತಿತ್ತು. ಇದೀಗ ತಡೆಗೋಡೆ ನಿರ್ಮಾಣ ಆಗಿರುವುದರಿಂದ ಮಳೆಯಲ್ಲೂ ಸುರಕ್ಷಿತವಾಗಿ ಸಂಚರಿಸಬಹುದಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಇನ್ನೂ ೧೧ ಸೂಕ್ಷö್ಮ ಪ್ರದೇಶದಲ್ಲಿಯೂ ಕಾಮಗಾರಿ ಚುರುಕಾಗಿ ನಡೆಯುತ್ತಿದ್ದು, ಮಳೆಯ ಪ್ರಮಾಣ ಕಡಿಮೆ ಇದ್ದರೆ ಮುಂದಿನ ೨ ತಿಂಗಳ ಒಳಗೆ ಎಲ್ಲಾ ಕೆಲಸವೂ ಮುಗಿಯಲಿದೆ ಎನ್ನುವ ಅಧಿಕಾರಿಗಳು ನಂತರ ಉಳಿದ ಕಡೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದಲ್ಲದೆ ರಸ್ತೆ ಸುರಕ್ಷತೆ ಹೆಚ್ಚಿಸಲು ೧೭ ಆಯ್ದ ಸ್ಥಳಗಳಲ್ಲಿ ಒಟ್ಟು ೧,೬೯೦ ಮೀಟರ್ ಉದ್ದದ ರಸ್ತೆ ವಿಸ್ತರಿಸಲಾಗುತ್ತಿದೆ. ೭೭.೭೫೦ ಕಿಮೀ ಮತ್ತು ೮೯.೬೭೦ ಕಿಮೀನಲ್ಲಿ ಹಳೆಯದಾದ ಎರಡು ಬಾಕ್ಸ್ ಮೋರಿಗಳ ಮರು ನಿರ್ಮಾಣ, ರಕ್ಷಣಾತ್ಮಕ ಕ್ರಾಶ್ ಬ್ಯಾರಿಯರ್‌ಗಳು ಮತ್ತು ಆಧುನಿಕ ಸಂಚಾರ ಸೂಚನಾ ಫಲಕಗಳನ್ನು ಅಳವಡಿಸುವುದು ಕೂಡ ಈ ಕಾಮಗಾರಿಯಲ್ಲಿ ಒಳಗೊಂಡಿದೆ.