ರಾಷ್ಟಿçÃಯ ಹೆದ್ದಾರಿ 275ರ ಮಡಿಕೇರಿ-ಸಂಪಾಜೆ ಮಧ್ಯೆ ವಾಹನ ದಟ್ಟಣೆ
ರಾಜ್ಯದ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿರುವ ರಾಷ್ಟಿçÃಯ ಹೆದ್ದಾರಿ 275ರ ಸಂಪಾಜೆ-ಕುಶಾಲನಗರ ಮಾರ್ಗದಲ್ಲಿ ಹೆದ್ದಾರಿ ಸುರಕ್ಷತಾ ಕಾಮಗಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. 94.08 ಕೋಟಿ ರೂ.ಗಳ ಬೃಹತ್ ಯೋಜನೆಗೆ ತಾಂತ್ರಿಕ ಅನುಮೋದನೆ ಸಿಕಿದ್ದು, ಹಣವೂ ಬಿಡುಗಡೆ ಆಗಿದೆ. ಈ ತಿಂಗಳಾAತ್ಯಕ್ಕೆ ಈ ಮಹತ್ವದ ಕಾಮಗಾರಿಗೆ ಚಾಲನೆ ಸಿಗಲಿದೆ.
ಕೊಡಗನ್ನು ಬಂದರು ನಗರಿ ಮಂಗಳೂರಿಗೆ ಸಂಪರ್ಕಿಸುವ ರಾಷ್ಟಿçÃಯ ಹೆದ್ದಾರಿ 275ರ ಸಂಪಾಜೆ-ಕುಶಾಲನಗರ ಮಾರ್ಗ ಎಲ್ಲಾ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿರುವ ರಸ್ತೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಕಾಫಿ ರಫ್ತು ಮಾಡಲು ಇದೇ ಹೆದ್ದಾರಿ ಬಳಕೆ ಆಗುತ್ತದೆ. ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಕ್ಷೇತ್ರಗಳು, ಪ್ರವಾಸ ಹೀಗೆ ವಿವಿಧ ರೀತಿಯಲ್ಲಿ ಈ ಮಾರ್ಗ ಕೊಡಗು, ದಕ್ಷಿಣ ಕನ್ನಡ ಮಾತ್ರವಲ್ಲದೆ ಅಕ್ಕಪಕ್ಕದ ಉಳಿದ ಜಿಲ್ಲೆಗಳಿಗೂ ಹೆಚ್ಚು ಪ್ರಯೋಜನಕಾರಿ ಆಗಿದೆ. ಸಂಪಾಜೆ ಘಾಟ್ ರಸ್ತೆ ಎಂದೇ ಗುರುತಿಸಲಾಗುವ ಈ ಮಾರ್ಗ ರಾಜ್ಯದ ಅಪಾಯಕಾರಿ ಮಾರ್ಗಗಳಲ್ಲಿ ಒಂದು ಎಂದು ಕೂಡ ಗುರುತಿಸಲಾಗುತ್ತದೆ.
2018ರ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೆದಕಲ್‌ನಿಂದ ಕೊಯನಾಡು ತನಕ ಈ ಹೆದ್ದಾರಿಯಲ್ಲಿ ಅಲ್ಲಲ್ಲಿ ಬರೆ ಕುಸಿದ ಕಾರಣ ತಿಂಗಳುಗಳ ಕಾಲ ಸಂಪರ್ಕ ಕಡಿತ ಆಗಿತ್ತು. ನಂತರದ ದಿನಗಳಲ್ಲಿ ಪ್ರತಿ ಮಳೆಗಾಲವೂ ಇಲ್ಲಿ ಆತಂಕದಿAದಲೇ ಸಂಚರಿಸುವ ವಾತಾವರಣ ನಿರ್ಮಾಣ ಆಗಿದೆ. ತಾತ್ಕಾಲಿಕ ದುರಸ್ತಿ ಕಾರ್ಯಗಳು ನಡೆಯುತ್ತಿದ್ದರೂ ಜೋರು ಮಳೆಯ ಸಂದರ್ಭ ಇಲ್ಲಿ ಸಂಚಾರ ಸುರಕ್ಷಿತ ಅಲ್ಲ ಎನ್ನುವ ಭಾವನೆ ಜನರಲ್ಲಿ ಮನೆ ಮಾಡಿದೆ. ಇದರ ಜತೆಗೆ ಅಲಲ್ಲಿ ಅಪಘಾತ ವಲಯಗಳನ್ನೂ ಗುರುತಿಸಲಾಗಿದೆ. ಹಾಗಾಗಿ ಇಲ್ಲಿ ಈಗ ಸುರಕ್ಷತಾ ಕಾಮಗಾರಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿರುವುದರಿAದ ಸಾರ್ವಜನಿಕರಲ್ಲಿದ್ದ ಆತಂಕ ದೂರ ಮಾಡುವಲ್ಲಿ ಸಹಕಾರಿ ಆಗಲಿದೆ.
ಕರ್ನಾಟಕದ ಅತ್ಯಂತ ಜನನಿಬಿಡ ಹೆದ್ದಾರಿಗಳಲ್ಲಿ ಒಂದಾದ ರಾಷ್ಟಿçÃಯ ಹೆದ್ದಾರಿ 275ರ ಬಂಟ್ವಾಳ-ಬೆAಗಳೂರು ವಿಭಾಗದಲ್ಲಿ ಸಂಪಾಜೆಯಿAದ ಕುಶಾಲನಗರ ತನಕ ರಸ್ತೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಭರ್ಜರಿ ಕೊಡುಗೆ ನೀಡಿದೆ. ಹೆದ್ದಾರಿ ಸುರಕ್ಷತೆಯ ಕಾಮಗಾರಿಗಾಗಿ 94.08 ಕೋಟಿ ರೂ.ಗಳ ಬೃಹತ್ ಯೋಜನೆಗೆ ತಾಂತ್ರಿಕ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಮೈಸೂರು ಕೊಡಗು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಹಿತಿ ನೀಡಿದ್ದಾರೆ.
ಈ ಹೆದ್ದಾರಿಯ ಆಯ್ದ ಭಾಗಗಳಲ್ಲಿ ರಕ್ಷಣಾತ್ಮಕ ಗೋಡೆಗಳ ನಿರ್ಮಾಣ ಮತ್ತು ಸುರಕ್ಷತಾ ಕಾಮಗಾರಿಗಳಿಗಾಗಿ ಹಣ ಬಿಡುಗಡೆ ಮಾಡಿ ಆರ್ಥಿಕ ಮತ್ತು ತಾಂತ್ರಿಕ ಮಂಜೂರಾತಿಯನ್ನು ನೀಡಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಪದೇ ಪದೇ ಭೂಕುಸಿತಕ್ಕೆ ಒಳಗಾಗುವ ಬಂಟ್ವಾಳ ಮತ್ತು ಬೆಂಗಳೂರು ನಡುವಿನ ಈ ಘಟ್ಟ ಪ್ರದೇಶದ ರಸ್ತೆಯಲ್ಲಿ ಇನ್ನು ಮುಂದೆ ಇಂಥ ಘಟನೆ ತಡೆಗಟ್ಟಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು 78ನೇ ಕಿಮೀನಿಂದ 125ನೇ ಕಿಮೀ ತನಕದ ಸಂಪಾಜೆಯಿAದ ಕುಶಾಲನಗರ ವ್ಯಾಪ್ತಿಯಲ್ಲಿ ಸುರಕ್ಷತಾ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಈ ಯೋಜನೆಯನ್ನು ಇಪಿಸಿ (ಎಂಜಿನಿಯರಿAಗ್, ಪ್ರೊಕ್ಯೂರ್‌ಮೆಂಟ್ ಹಾಗೂ ಕನ್ಸ್ಟ್ರಕ್ಷನ್ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಸಚಿವಾಲಯದ ತಾಂತ್ರಿಕ ವರದಿಯ ಪ್ರಕಾರ ಯೋಜನೆಯು ಒಟ್ಟು 1,650 ಮೀಟರ್ ಉದ್ದದ ಆರ್‌ಸಿಸಿ ಕ್ಯಾಂಟಿಲಿವರ್ ರಿಟೈನಿಂಗ್ ವಾಲ್ ಮತ್ತು ಕಣಿವೆಯ ಬದಿಯಲ್ಲಿ ವಿಶೇಷವಾಗಿ 110 ಮೀಟರ್ ಉದ್ದದ ಪ್ರೆಶರ್ ರಿಲೀಫ್ ಗೋಡೆಗಳ ನಿರ್ಮಾಣ ಒಳಗೊಂಡಿದೆ. ಗುಡ್ಡದ ಬದಿಯಲ್ಲಿ ಮಣ್ಣು ಕುಸಿಯದಂತೆ 1,910 ಮೀಟರ್ ಉದ್ದದ ಬ್ರೆಸ್ಟ್ ವಾಲ್ ಮತ್ತು ನೀರು ಸರಾಗವಾಗಿ ಹರಿಯಲು 2,720 ಮೀಟರ್ ಉದ್ದದ ಚೂಟ್ ಡ್ರೈನ್‌ಗಳನ್ನು ನಿರ್ಮಿಸಲಾಗುತಿದೆ.
ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು 17 ಆಯ್ದ ಸ್ಥಳಗಳಲ್ಲಿ ಒಟ್ಟು 1,690 ಮೀಟರ್ ಉದ್ದದ ರಸ್ತೆಯನ್ನು ವಿಸ್ತರಿಸಲಾಗುತ್ತಿದೆ. 77.750 ಕಿಮೀ ಮತ್ತು 89.670 ಕಿಮೀನಲ್ಲಿ ಹಳೆಯದಾದ ಎರಡು ಬಾಕ್ಸ್ ಮೋರಿಗಳನ್ನು ಮರು ನಿರ್ಮಾಣ ಮಾಡಲಾಗುವುದು. ರಕ್ಷಣಾತ್ಮಕ ಕ್ರಾಶ್ ಬ್ಯಾರಿಯರ್‌ಗಳು ಮತ್ತು ಆಧುನಿಕ ಸಂಚಾರ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು. ಮಳೆಗಾಲವನ್ನೂ ಒಳಗೊಂಡAತೆ ಒಟ್ಟು 18 ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಗುತ್ತಿಗೆದಾರರು ಕಾಮಗಾರಿ ಮುಗಿದ ನಂತರ ಮುಂದಿನ 10 ವರ್ಷಗಳ ಕಾಲ ರಸ್ತೆಯ ದೋಷ ಹೊಣೆಗಾರಿಕೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಬೇಕಾಗುತ್ತದೆ. ಯೋಜನೆಯ ಗುಣಮಟ್ಟ ಕಾಪಾಡಲು ಸಚಿವಾಲಯವು ಹಲವು ಷರತ್ತುಗಳನ್ನು ವಿಧಿಸಿದೆ. ಕಾಮಗಾರಿ ಆರಂಭಿಸುವ ಮುನ್ನ ಮತ್ತು ನಂತರ ನೆಟ್‌ವರ್ಕ್ ಸರ್ವೆ ವೆಹಿಕಲ್ (ಎನ್‌ಎಸ್‌ವಿ) ಮೂಲಕ ರಸ್ತೆಯ ಗುಣಮಟ್ಟವನ್ನು ದಾಖಲಿಸುವುದು ಕಡ್ಡಾಯಗೊಳಿಸಿದೆ. ಕಾಮಗಾರಿ ಅವಧಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದAತೆ ಏಕಕಾಲಕ್ಕೆ 3 ಕಿಮೀಗಿಂತ ಹೆಚ್ಚು ಉದ್ದದ ಕಾಮಗಾರಿ ನಡೆಸದಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ಯೋಜನೆ ಪೂರ್ಣಗೊಂಡ ನಂತರ ಬೆಂಗಳೂರು ಮತ್ತು ಕರಾವಳಿ ಭಾಗದ ನಡುವಿನ ಸಂಚಾರವು ಹವಾಮಾನ ವೈಪರೀತ್ಯಗಳ ಸಂದರ್ಭದಲ್ಲೂ ಹೆಚ್ಚು ಸುರಕ್ಷಿತ ಮತ್ತು ಸುಗಮವಾಗಲಿದೆ. ಮಡಿಕೇರಿ ಬಳಿ ಈ ತಿಂಗಳಾAತ್ಯಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕಾಮಗಾರಿಗೆ ಚಾಲನೆ ಸಿಗಲಿದೆ.
ಮಳೆಗಾಲದಲ್ಲಿ ಪದೇ ಪದೇ ಭೂಕುಸಿತಕ್ಕೆ ಒಳಗಾಗುವ ಬಂಟ್ವಾಳ ಮತ್ತು ಬೆಂಗಳೂರು ನಡುವಿನ ಘಟ್ಟ ಪ್ರದೇಶದ ಈ ರಸ್ತೆಯಲ್ಲಿ ಇನ್ನು ಮುಂದೆ ಇಂಥ ಘಟನೆ ತಡೆಗಟ್ಟಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು 78ನೇ ಕಿಮೀನಿಂದ 125ನೇ ಕಿಮೀ ತನಕದ ಸಂಪಾಜೆಯಿAದ ಕುಶಾಲನಗರ ವ್ಯಾಪ್ತಿಯಲ್ಲಿ ಸುರಕ್ಷತಾ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆ ಪೂರ್ಣಗೊಂಡ ನಂತರ ಬೆಂಗಳೂರು ಮತ್ತು ಕರಾವಳಿ ಭಾಗದ ನಡುವಿನ ಸಂಚಾರವು ಹವಾಮಾನ ವೈಪರೀತ್ಯಗಳ ಸಂದರ್ಭದಲ್ಲೂ ಹೆಚ್ಚು ಸುರಕ್ಷಿತ ಮತ್ತು ಸುಗಮವಾಗಲಿದೆ.