ಸುಂಟಿಕೊಪ್ಪ ವಾಹನ ಚಾಲಕರ ಮತ್ತು ಆಟೋ ಮಾಲೀಕರ-ಚಾಲಕರ ಸಂಘದ ವೇದಿಕೆಯ ಮುಂಭಾಗದಲ್ಲಿ ಬುಧವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷಕ ದಿನೇಶ್‌ಕುಮಾರ್ ಮಾತನಾಡಿದರು. ಮೋಹನ್‌ರಾಜ್, ಶರೀಫ್, ಸಚಿನ್, ಬಿ.ಎಂ.ಪೂವಪ್ಪ, ಎ.ಹಂಸ, ಬಿ.ಎ.ತಿಮ್ಮಪ್ಪ, ಇಸ್ಮಾಯಿಲ್ ಇತರರಿದ್ದರು.
ಸುಂಟಿಕೊಪ್ಪ: ಮಾನವರಾದ ನಾವು ಆರೋಗ್ಯವನ್ನು ಕಾಪಾಡುವ ದಿಸೆಯಲ್ಲಿ ಆಹಾರ ಪದಾರ್ಥಗಳ ಬಗ್ಗೆ ಹೆಚ್ಚು ನಿಗಾ ವಹಿಸುವ ನಾವು ವಾಹನ ಹಾಗೂ ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸುರಕ್ಷತೆಯ ಬಗ್ಗೆ ನಿಗಾ ವಹಿಸದೇ ಇರುವುದು ಬೇಸರದ ಸಂಗತಿ ಎಂದು ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷಕ ದಿನೇಶ್‌ಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ವಾಹನ ಚಾಲಕರು ಮತ್ತು ಆಟೋ ಮಾಲೀಕರ-ಚಾಲಕರ ಸಂಘದ ವೇದಿಕೆಯ ಮುಂಭಾಗದಲ್ಲಿ ಬುಧವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಮಾತನಾಡಿ, ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸುವ ಸಂದರ್ಭದಲ್ಲಿ ತಲೆಗೆ ಹೆಲ್ಮೆಟ್ ಧರಿಸದೆ ತಮ್ಮ ತಲೆ ಕೂದಲುಗಳು ಕೆದರಿಕೊಳ್ಳುವುದು, ಕೂದಲು ಉದುರಿಕೊಳ್ಳುವ ಬಗ್ಗೆ ಚಿಂತಿಸುವ ನೀವು ಮೊದಲು ನಿಮ್ಮ ಕುಟುಂಬ ವರ್ಗದ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ, ಪೌಷ್ಟಿಕ ಆಹಾರ ಪದಾರ್ಥಗಳ ಬಗ್ಗೆ ಚಿಂತಿಸುವ ನಾವು ಮಾನವನ ದೇಹದ ಮುಖ್ಯ ಅಂಗವಾದ ದ್ವಿಚಕ್ರ ವಾಹನಗಳ ಚಾಲನೆ ಬಗ್ಗೆ ಒತ್ತು ಕೊಡದೆ ಅಜಾಗಕರೂತೆಯಿಂದ ನಡೆದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್, ಆಟೋ ಮಾಲೀಕ ಮತ್ತು ಚಾಲಕರ ಸಂಘದ ಅಧ್ಯಕ್ಷ ಶರೀಫ್, ಕಾರ್ಯದರ್ಶಿ ಸಚಿನ್, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷರಾದ ಬಿ.ಎಂ.ಪೂವಪ್ಪ, ಎ.ಹಂಸ, ಬಿ.ಎ.ತಿಮ್ಮಪ್ಪ, ಇಸ್ಮಾಯಿಲ್, ಕೃಷ್ಣಪ್ಪ ಸೇರಿದಂತೆ ಆಟೋ ಚಾಲಕರು, ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.