೧೬ನೇ ಶತಮಾನದ ವೀರರಾಣಿ ಚೆನ್ನಭೈರಾದೇವಿಯ ಆಡಳಿತ, ಧೈರ್ಯ ಹಾಗೂ ಸಾಧನೆಗಳನ್ನು ಆಧರಿಸಿದ ಸಂಕ್ಷಿಪ್ತ ನಾಟಕದಲ್ಲಿ ಅಭಿನಯಿಸಿದ ತನಿಷ, ಜೆಶಿಕ, ವಿಷ್ಣುವರ್ಧನ್ ಪ್ರೀತಂ ಪೂರ್ಣಚಂದ್ರ ಅವರೊಂದಿಗೆ ದಾಕ್ಷಾಯಣಿ, ಮಂಜುಳಾ ಇತರರಿದ್ದರು.
- ಕೆಪಿಎಸ್ ಶಾಲೆಯಲ್ಲಿ ಸಚೇತನಾ ಕಾರ್ಯಕ್ರಮ
ಗೋಣಿಕೊಪ್ಪ: ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್) ಪ್ರಾಥಮಿಕ ವಿಭಾಗದಲ್ಲಿ ಸಚೇತನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ೧೬ನೇ ಶತಮಾನದ ವೀರರಾಣಿ ಚೆನ್ನಭೈರಾದೇವಿಯ ಆಡಳಿತ, ಧೈರ್ಯ ಹಾಗೂ ಸಾಧನೆಗಳನ್ನು ಆಧರಿಸಿದ ಸಂಕ್ಷಿಪ್ತ ನಾಟಕವನ್ನು ೪ನೇ ತರಗತಿಯ ವಿದ್ಯಾರ್ಥಿಗಳು ಅಭಿನಯದ ಮೂಲಕ ಪ್ರಸ್ತುತಪಡಿಸಿದರು. ಐತಿಹಾಸಿಕ ವಿಷಯವನ್ನು ವಿದ್ಯಾರ್ಥಿಗಳು ಪಾತ್ರಧಾರಿಗಳಾಗಿ ಮೂಡಿಬಂದಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.
ವೀರರಾಣಿ ಚೆನ್ನಭೈರಾದೇವಿ ಪಾತ್ರದಲ್ಲಿ ತನಿಷ ಪಿಳ್ಳೆ.ಪಿ.ವಿ, ಮಂತ್ರಿ ಪಾತ್ರದಲ್ಲಿ ಹೆಚ್.ಎಸ್.ಜೆಶಿಕ ಹಾಗೂ ಆಸ್ಥಾನಿಕರಾಗಿ ಸಿ.ವಿಷ್ಣುವರ್ಧನ್ ಮತ್ತು ಎನ್.ವಿ.ಪ್ರೀತಂ ಪೂರ್ಣಚಂದ್ರ ಅಭಿನಯಿಸಿದರು.
ವಿದ್ಯಾರ್ಥಿಗಳ ಈ ಚಟುವಟಿಕೆಗೆ ತರಗತಿ ಶಿಕ್ಷಕಿಯರಾದ ಎನ್.ಎಸ್.ದಾಕ್ಷಾಯಣಿ ಹಾಗೂ ಆರ್.ಮಂಜುಳಾ ಮಾರ್ಗದರ್ಶನ ನೀಡಿದರು. ಮಕ್ಕಳನ್ನು ಐತಿಹಾಸಿಕ ಪಾತ್ರಗಳಿಗೆ ಸಜ್ಜುಗೊಳಿಸುವಲ್ಲಿ ಪೋಷಕರು ಸಹ ಸಹಕಾರ ನೀಡಿದರು. ವಿಶೇಷವಾಗಿ ತನಿಷ ಪಿಳ್ಳೆ ಅವರ ತಾಯಿ ಸ್ಮಿತಾ.ಟಿ.ಎಂ. ಅವರು ಮಕ್ಕಳ ಅಲಂಕಾರ ಹಾಗೂ ಕಾರ್ಯಕ್ರಮದ ಸಿದ್ಧತೆಯಲ್ಲಿ ಸಲಹೆ-ಸಹಕಾರ ನೀಡಿದರು.
ವಿದ್ಯಾರ್ಥಿಗಳು ಐತಿಹಾಸಿಕ ಘಟನೆಗಳನ್ನು ಅಭಿನಯದ ಮೂಲಕ ಪರಿಣಾಮಕಾರಿಯಾಗಿ ಪರಿಚಯಿಸಿದುದಕ್ಕೆ ಮುಖ್ಯ ಶಿಕ್ಷಕ ಬಿ.ಎಂ.ವಿಜಯ್ ಹಾಗೂ ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.