ದುಬೈಯಲ್ಲಿ ನಡೆದ ಅಂತಾರಾಷ್ಟಿçÃಯ ಮಟ್ಟದ 15ನೇ ಬ್ರೆöÊನೋಬ್ರೆöÊನ್ ಸ್ಪರ್ಧೆಯಲ್ಲಿ ಚಾಂಪಿಯನ್ ಆದ ಮಡಿಕೇರಿಯ ಎಸ್. ಅನ್ವಿತ್ 
ಕೊಡಗು

ಬ್ರೈನೋ ಬ್ರೈನ್ ಸ್ಪರ್ಧೆಯಲ್ಲಿ ಎಸ್. ಅನ್ವಿತ್ ಚಾಂಪಿಯನ್

ಮಡಿಕೇರಿ:
ಇತ್ತೀಚೆಗೆ ದುಬೈಯಲ್ಲಿ ನಡೆದ ಅಂತಾರಾಷ್ಟಿçÃಯ ಮಟ್ಟದ 15ನೇ ಬ್ರೈನೋ ಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ಎಸ್. ಅನ್ವಿತ್ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ನಗರದ ಬ್ರೆöÊನೋಬ್ರೆöÊನ್ ಅಬಕಾಸ್ ಸಂಸ್ಥೆಯ ಮುಖ್ಯಸ್ಥೆ ಮಾಪಂಗಡ ಕವಿತಾ ಕರುಂಬಯ್ಯ ಅವರ ಬಳಿ ಅನ್ವಿತ್ ಎಸ್. ತರಬೇತಿ ಪಡೆಯುತ್ತಿದ್ದಾನೆ. ದುಬೈನ ಶೇಖ್ ರಶೀದ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಅನ್ವಿತ್ ಸೇರಿದಂತೆ ಕರ್ನಾಟಕದಿಂದ ಆರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಮಾರು 16 ದೇಶಗಳ 1800 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರೆöÊನೋಬ್ರೆöÊನ್ ಅಂತಾರಾಷ್ಟಿçÃಯ ದುಬೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ ಹಾಗೂ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಹ್ಮಣ್ಯಂ ಅನ್ವಿತ್ ಸಾಧನೆಯನ್ನು ಶ್ಲಾಘಿಸಿದರು. ಮಾರ್ಗದರ್ಶಕಿ ಮಾಪಂಗಡ ಕವಿತಾ ಕರುಂಬಯ್ಯ ಮಾತನಾಡಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅನ್ವಿತ್, ರಾಷ್ಟçಮಟ್ಟ ಮತ್ತು ಅಂತಾರಾಷ್ಟಿçÃಯ ಮಟ್ಟದ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಹೆಮ್ಮೆ ಎನಿಸಿದೆ. ತಂದೆ ತಾಯಿಗಳ ಸಹಕಾರದಿಂದ ಅನ್ವಿತ್ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದು, ಅಂತಾರಾಷ್ಟಿçÃಯ ಮಟ್ಟದ ಯಶಸ್ಸು ಅವರ ಕುಟುಂಬದವರಿಗೆ ಸಲ್ಲಬೇಕು ಎಂದರು.
ಮದೆನಾಡಿನ ಬಿಜಿಎಸ್ ಶಾಲೆಯ 3ನೇ ತರಗತಿಯ ವಿದ್ಯಾರ್ಥಿಯಾಗಿರುವ ಎಂಟು ವರ್ಷದ ಎಸ್. ಅನ್ವಿತ್ ಮದೆನಾಡು ಮದೆ ಮಹೇಶ್ವರ ಪದವಿಪೂರ್ವ ಕಾಲೇಜು ಉಪನ್ಯಾಸಕÀ ವಿ. ಶ್ರೀನಿವಾಸ ಹಾಗೂ ಎಂ.ಎನ್. ಪವಿತ್ರ ದಂಪತಿಯ ಪುತ್ರ.