ಗೋಣಿಕೊಪ್ಪಲು ಪರಿಮಳ ಮಂಗಳ ವಿಹಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ಸಂಘ ಮತ್ತು ಹಸಿರು ಸೇನೆ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಕಾಡ್ಯಮಾಡ ಮನುಸೋಮಯ್ಯ, ಮುಖಂಡರಾದ ಬಾಚಮಾಡ ಭವಿಕುಮಾರ, ಅಜ್ಜಮಾಡ ಚಂಗಪ್ಪ, ಸಂಘಟನೆಯ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಇದ್ದರು.  
ಕೊಡಗು

ಯುವಜನರು ರೈತಪರ ಹೋರಾಟದ ಧ್ವನಿಯಾಗಲಿ

ಎ. ಆರ್. ರಘುರಾಮ
ಪೊನ್ನಂಪೇಟೆ : ಯುವಜನರು ರೈತಪರ ಹೋರಾಟದ ಧ್ವನಿಯಾಗಬೇಕು ಎಂದು ಕೊಡಗು ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಹೇಳಿದರು.ಗೋಣಿಕೊಪ್ಪಲು ಪರಿಮಳ ಮಂಗಳ ವಿಹಾರದಲ್ಲಿ ಮಂಗಳವಾರ ಸಂಘಟನೆ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಭೂಮಿಯ ದಾಖಲಾತಿ ಸಮಸ್ಯೆ, ಬೆಳೆ ನಷ್ಟ, ಕಾಡು ಪ್ರಾಣಿಗಳ ಉಪಟಳ ಮುಂತಾದ ಹಲವಾರು ಸಮಸ್ಯೆಗಳ ಬಗ್ಗೆ ರೈತ ಸಂಘ ನಿರಂತರ ಹೋರಾಟವನ್ನು ಮಾಡುತ್ತಲೇ ಇದೆ. ಸಮಸ್ಯೆಗಳಿಗೆ ಪರಿಹಾರ ಪರಿಹಾರ ನೀಡುವ ನಿಟ್ಟಿನಲ್ಲಿ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳಿಂದ ನಿರ್ಲಕ್ಷೃ ಧೋರಣೆ ಮೊದಲಿನಿಂದಲೂ ಇದೆ. ಕಂದಾಯ ಇಲಾಖೆ ಸೇರಿದಂತೆ ಸರ್ಕಾರದ ವ್ಯವಸ್ಥೆಯ ವಿರುದ್ಧ ಭ್ರಷ್ಟಾಚಾರದ ದೂರುಗಳು ಸಾಕಷ್ಟು ಇವೆ. ರೈತರಿಗೆ ಸರ್ಕಾರದಿಂದ ಬರುವ ಪರಿಹಾರ ಮತ್ತು ಸವಲತ್ತುಗಳನ್ನು ನೀಡುವಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಇಂಥಹ ಸಂದರ್ಭದಲ್ಲಿ ಸಂಘಟನೆ ಹೋರಾಟ ಮಾಡುತ್ತಿದ್ದು, ಯುವಜನರು ಇದಕ್ಕೆ ಬೆಂಬಲಿಸಿ, ತಾವೂ ಹೋರಾಟದ ಭಾಗವೇ ಆಗಬೇಕು ಎಂದರು.
ಮಾನವ- ವನ್ಯಜೀವಿಗಳ ಸಂಘರ್ಷಕ್ಕೆ ಪ್ರವಾಸೋದ್ಯಮವೇ ಮುಖ್ಯ ಕಾರಣವಾಗಿದೆ. ಇದನ್ನು ಸರ್ಕಾರದ ಗಮನಕ್ಕೂ ತರಲಾಗಿದೆ . ಮಾನವರ ಮೇಲೆ ಹುಲಿಗಳ ದಾಳಿಯಿಂದ ನಾಗರಹೊಳೆ ಭಾಗದಲ್ಲಿ ಸಫಾರಿಗೆ ಕಡಿವಾಣ ಹಾಕಿರುವುದರಿಂದ ವನ್ಯಜೀವಿಗಳ ಉಪಟಳ ಸ್ವಲ್ಪಮಟ್ಟಿಗೆ ತಗ್ಗಿರುವುದು ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಮುಖಂಡರಾದ ಬಾಚಮಾಡ ಭವಿಕುಮಾರ, ಅಜ್ಜಮಾಡ ಚಂಗಪ್ಪ, ಸಂಘಟನೆಯ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಉಪಾಧ್ಯಕ್ಷ ಜಿ.ಎಂ ಪೂವಯ್ಯ, ಕಾನೂನು ಸಲಹೆಗಾರ ಹೇಮಚಂದ್ರ ಮತ್ತು
ಪದಾಧಿಕಾರಿಗಳು ಹಾಜರಿದ್ದರು.