ಕೊಡಗು ಜಿಲಾ ಕೇಂದ್ರ ಸಹಕಾರ ಬ್ಯಾಂಕಿನ ಸುಂಟಿಕೊಪ್ಪ ಶಾಖೆಯ ಗ್ರಾಹಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಕೊಡಂದೇರ ಪಿ.ಗಣಪತಿ ಮಾತನಾಡಿದರು. ಜೆರ್ಮಿ ಡಿಸೋಜಾ, ಕ್ಲೈವ ಪೊನ್ನಪ್ಪ ಇತರರು ಇದ್ದರು.
ಸುಂಟಿಕೊಪ್ಪ: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಸುಂಟಿಕೊಪ್ಪ ಶಾಖೆಯು 2025-26ನೇ ಸಾಲಿನಲ್ಲಿ 51.70 ಕೋಟಿ ರೂ. ಠೇವಣಿ ಸಂಗ್ರಹಿಸಿ 42.01 ಕೋಟಿ ರೂ. ಸಾಲ ವಿತರಿಸಿ, 1.29 ಕೋಟಿ ರೂ. ಲಾಭಗಳಿಸಿದೆ ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ತಿಳಿಸಿದರು.
ಇಲ್ಲಿನ ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಸುಂಟಿಕೊಪ್ಪ ಶಾಖೆಯ ಗ್ರಾಹಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಬ್ಯಾಂಕ್ ಜಿಲ್ಲೆಯಲ್ಲಿ 25 ಶಾಖೆಗಳನ್ನು ಹೊಂದಿದ್ದು, ಎಲ್ಲವೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2025-26ನೇ ಸಾಲಿನಲ್ಲಿ 2,043 ಕೋಟಿ ರೂ. ವಿವಿಧ ರೀತಿಯ ಠೇವಣಿ ಸಂಗ್ರಹಣೆ ಮಾಡಿ ಸದಸ್ಯರಿಗೆ 1,772 ಕೋಟಿ ರೂ. ಸಾಲ ವಿತರಿಸಿ 22.39 ಕೋಟಿ ರೂ. ನಿವ್ವಳ ಲಾಭಗಳಿಸಿರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಸುಂಟಿಕೊಪ್ಪ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜೆರ್ಮಿ ಡಿಸೋಜಾ, ನಿರ್ದೇಶಕರಾದ ಕ್ಲೈವ ಪೊನ್ನಪ್ಪ, ಕೆ.ಎಸ್.ಮಂಜುನಾಥ್, ರಮೇಶ್ ಚಂಗಪ್ಪ, ಚೆಟ್ಟಳ್ಳಿ ಪಾ.ಕೃ.ಪ.ಸ.ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ, ಮಹಿಳಾ ಸಮಾಜದ ಅಧ್ಯಕ್ಷೆ ಪಿ.ಪಿ.ಲೀಲಾವತಿ, ಎನ್.ಸಿ.ದಿನಕರ, ಮಾದಾಪುರ ಪಾ.ಕೃ.ಪ.ಸ.ಸಂಘದ ಅಧ್ಯಕ್ಷ ನಾಪಂಡ ಎಂ.ಉತ್ತಪ್ಪ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಣವಟ್ಟಿರ ಬಿ.ಬೆಳ್ಳಿಯಪ್ಪ ಹಾಗೂ ಅಧ್ಯಕ್ಷರ ಅಪ್ತ ಸಹಾಯಕರಾದ ಸಿ.ಎಸ್.ಗಣಪತಿ,ಶಾಖೆಯ ವ್ಯವಸ್ಥಾಪಕರದ ಸತೀಶ್, ವ್ಯವಸ್ಥಾಪಕರಾದ ಎಂ.ಮಮತಾ ಉಪಸ್ಥಿತರಿದ್ದರು.