ಬಾಳೆಲೆ ವಿಜಯಲಕ್ಷ್ಮೀ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳು ಬಡ ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಧನಸಹಾಯ ಮಾಡಿದರು. ಮನೋಜ್, ಚಂದ್ರಾವತಿ, ಪ್ರಫುಲಾ, ಲಕ್ಷ್ಮೀ, ಮಮತಾ, ಸುಮಾ, ದಿವ್ಯಾ ಇತರರು ಇದ್ದರು.
- ಬಾಳೆಲೆ ವಿಜಯಲಕ್ಷ್ಮೀ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಬಳಗದಿಂದ ಹಸ್ತಾಂತರ
ಪೊನ್ನಂಪೇಟೆ: ಬಾಳೆಲೆ ವಿಜಯಲಕ್ಷ್ಮೀ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಡ ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರೋತ್ಸಾಹಿಸಲು 2000-2001ನೇ ಬ್ಯಾಚಿನ ಹಳೇ ವಿದ್ಯಾರ್ಥಿಗಳ ಬಳಗದ ಸದಸ್ಯರು 10 ಸಾವಿರ ರೂ. ನಗದನ್ನು ಮುಖ್ಯ ಶಿಕ್ಷಕ ಕೆ.ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಿದರು.
ಬಳಗದ ಪ್ರಮುಖರಾದ ಮನೋಜ್, ಚಂದ್ರಾವತಿ, ಪ್ರಫುಲ್ಲ, ಲಕ್ಷ್ಮೀ, ಸದೇಶ್ ಕಾರ್ಮಡ್ , ವೈಶಾಲಿ, ಮಮತಾ, ಫ್ಯಾನ್ಸಿ, ಸುಮಾ, ದಿವ್ಯಾ, ಆಶಾ, ರೌಫ್, ಅಂಬಿಕಾ, ಶಿಕ್ಷಕರಾದ ಬೆಂಡಿಕ್ಟ್ ಫರ್ನಾಂಡಿಸ್ , ತಿಮ್ಮರಾಜು, ಸುಬ್ಬಯ್ಯ ಇದ್ದರು.