ಅಂಗನವಾಡಿ ಕೇಂದ್ರಗಳಿಗೆ ಚೇರ್ ಮತ್ತು ಕಥೆ ಪುಸ್ತಕಗಳನ್ನು ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ವಿತರಿಸಲಾಯಿತು. ಕಿರಣ್ ಕುಂದರ್, ಸವಿತಾ ಕೀರ್ತನ್, ಪ್ರಮೀಳಾ ಶೆಟ್ಟಿ ಇತರರಿದ್ದರು.
- ರೋಟರಿ ವುಡ್ಸ್‌ನಿಂದ ಚೇರ್, ಪುಸ್ತಕಗಳ ಕೊಡುಗೆ
ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಗರ ವ್ಯಾಪ್ತಿಯ ರಾಜೇಶ್ವರಿ ನಗರ, ಮಹಾದೇವಪೇಟೆ, ಚಂದ್ರಗಿರಿ, ಆಜಾದ್ ನಗರ, ಗದ್ದಿಗೆ, ತ್ಯಾಗರಾಜ ಕಾಲೋನಿ, ಮಲ್ಲಿಕಾರ್ಜುನ ನಗರದ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಚೇರ್ ಮತ್ತು ಕಥೆ ಪುಸ್ತಕಗಳನ್ನು ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ವಿತರಿಸಲಾಯಿತು.
ಈ ಸಂದರ್ಭ ರೋಟರಿ ವುಡ್ಸ್‌ನ ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಗರ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಚೇರ್ ಮತ್ತು ಕಥೆ ಪುಸ್ತಕಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಂಗನವಾಡಿ ಕೇಂದ್ರಗಳಿಗೆ ಬೇಡಿಕೆಗನುಗುಣವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಸಂಘಸಂಸ್ಥೆಗಳ ಸಹಕಾರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರೋಟರಿ ವುಡ್ಸ್ ಮಡಿಕೇರಿ ವತಿಯಿಂದ ಚೇರ್ ಮತ್ತು ಕಥೆ ಪುಸ್ತಕಗಳನ್ನು ಅಂಗನವಾಡಿಗಳಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೋಟರಿ ಮಡಿಕೇರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ, ರೋಟೇರಿಯನ್‌ಗಳಾದ ವಸಂತ್ ಕುಮಾರ್, ಲೀಲಾವತಿ, ಸಂಪತ್ ಕುಮಾರ್, ಪಿ.ರವಿ ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಗರ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಾದ, ಇಂದಿರಾ, ಶೃತಿ ಪಾಂಡುಶೇಟ್, ಸುಮಿತ್ರ, ಪಾರಿಜಾತ, ಅಂಬಿಕಾ, ನೇತ್ರ ಹಾಗೂ ಅಂಗನವಾಡಿ ಸಹಾಯಕಿಯರಾದ ವೀಣಾ, ಪ್ರೇಮ, ಸ್ನೇಹ, ರತ್ನ ಅವರ ಮೂಲಕ ಚೇರ್ ಮತ್ತು ಕಥೆ ಪುಸ್ತಕಗಳನ್ನು ವಿತರಿಸಲಾಯಿತು.