ಕುಶಾಲನಗರ ರೋಟರಿ ಸಂಸ್ಥೆ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಕೊಡಗು-ಮೈಸೂರು ಜಿಲ್ಲೆಗಳ ಗಡಿಭಾಗದ ಕಾವೇರಿ ಸೇತುವೆ ಮೇಲೆ ಬಣ್ಣದ ಚಿತ್ತಾರ ಮೂಡಿಸಲಾಗುತ್ತಿದೆ. 
ಕೊಡಗು

ಸ್ವಚ್ಛ ಕುಶಾಲನಗರಕ್ಕೆ ರೋಟರಿ ಪಣ

ಸುನಿಲ್ ಪೊನ್ನೇಟಿ
ಕುಶಾಲನಗರ:
ಸುವರ್ಣ ಸಂಭ್ರಮದಲ್ಲಿ ಇರುವ ಕುಶಾಲನಗರ ರೋಟರಿ ಸಂಸ್ಥೆ ಸ್ವಚ್ಛ ಕುಶಾಲನಗರಕ್ಕಾಗಿ ಪಣತೊಟ್ಟಿದೆ. ಈ ಹಿನ್ನೆಲೆಯಲ್ಲಿ ಕ್ಲೀನ್ ಸಿಟಿ - ಸ್ವಚ್ಛ ಕುಶಾಲನಗರ ನಮ್ಮ ಅಭಿಯಾನ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಗಿದೆ. ಈ ಸಂದರ್ಭ ಮಾತನಾಡಿದ ರೋಟರಿ ಕುಶಾಲನಗರ ಅಧ್ಯಕ್ಷ ಮನು ಪೆಮ್ಮಯ್ಯ ಊರು ದಿನಗಳ ಕಾಲ ಚಿತ್ರಕಲೆ ಕಾರ್ಯ ನಡೆಯಲಿದ್ದು, ಸ್ವಚ್ಛ ಕುಶಾಲನಗರ ಎಂಬುದು ಕೇವಲ ಅಭಿಯಾನವಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ರೋಟರಿ ಕುಶಾಲನಗರದೊಂದಿಗೆ ಕೈಜೋಡಿಸಿ ಈ ಸ್ವಚ್ಛತಾ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು.
ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಆರೋಗ್ಯಾಧಿಕಾರಿ ಉದಯ್, ರೋಟರಿ ಸದಸ್ಯರಾದ ಮಹೇಶ್ ನಲ್ವಾಡೆ, ಡಾ. ಹರೀಶ್ ಎ. ಶೆಟ್ಟಿ, ಉಲ್ಲಾಸ್ ಕೃಷ್ಣ, ಕ್ರೆಝ್‌ವೆಲ್ ಕೋಟ್ಸ್, ಕಾರ್ಯದರ್ಶಿ ಎಚ್.ಪಿ. ಮಂಜುನಾಥ ಈ ಸಂದರ್ಭ ಇದ್ದರು. ಇದೇ ಸಂದರ್ಭದಲ್ಲಿ ಎಸ್‌ಎಲ್‌ಎನ್ ಸಂಸ್ಥೆಯಿAದ ತ್ಯಾಜ್ಯ ವಿಂಗಡಣೆ ಯಂತ್ರವನ್ನು ದೇಣಿಗೆಯಾಗಿ ನೀಡಲಾಯಿತು.
ಕ್ಲೀನ್ ಸಿಟಿ - ಸ್ವಚ್ಛ ಕುಶಾಲನಗರ ಅಭಿಯಾನದ ಭಾಗವಾಗಿ ಕೊಡಗು-ಮೈಸೂರು ಜಿಲ್ಲೆಗಳ ಗಡಿಭಾಗದ ಕಾವೇರಿ ಸೇತುವೆಯ ಎರಡೂ ಕಡೆ ಇರುವ ತಡೆಗೋಡೆಗಳನ್ನು ಸ್ವಚ್ಛಗೊಳಿಸಲಾಗಿದೆ. ಸ್ವಚ್ಛತೆಯನ್ನು ಕಾಪಾಡಿ ಎಂಬ ಸಂದೇಶದೊAದಿಗೆ ಕೊಡಗಿನ ಪ್ರವಾಸಿತಾಣಗಳಲ್ಲಿ ತ್ಯಾಜ್ಯ ನಿರ್ವಹಣೆ, ಒಣ ಹಾಗೂ ಹಸಿ ಕಸದ ಸಂಗ್ರಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನೂ ಮೂಡಿಸಲಾಯಿತು.
ಸ್ವಚ್ಛತಾ ಜಾಗೃತಿ ಚಿತ್ರಕಲೆ ಕಾರ್ಯವನ್ನು ಕುಶಾಲನಗರ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಜಿ.ಎಂ.ಪಿ. ಶಾಲಾ ಆವರಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ತಡೆಗೋಡೆ, ಅರಣ್ಯ ಇಲಾಖೆ ಆವರಣ, ಸರ್ಕಾರಿ ಆಸ್ಪತ್ರೆ ಆವರಣ ಸೇರಿದಂತೆ ಹಲವು ಪ್ರಮುಖ ಬೀದಿಗಳ ಗೋಡೆಗಳ ಮೇಲೆ ಒಣ ಮತ್ತು ಹಸಿ ಕಸದ ನಿರ್ವಹಣೆ ಕುರಿತ ಜಾಗೃತಿ ಚಿತ್ರಗಳನ್ನು ಬರೆಯಲಾಗಿದೆ. ಕೊಡಗಿನ ಸುಂದರ ಪ್ರಕೃತಿ ಮತ್ತು ಪ್ರವಾಸೋದ್ಯಮ ಪ್ರತಿಬಿಂಬಿಸುವ ಚಿತ್ರಗಳು ಮೂಡಿಬರುತ್ತಿವೆ.