ಮಡಿಕೇರಿ ರಾಜಾಸೀಟ್ ಪಕ್ಕದಲ್ಲಿ ಇರುವ ಕೂರ್ಗ್ ವಿಲೇಜ್ 
ಕೊಡಗು

ಕೂರ್ಗ್ ವಿಲೇಜ್‌ಗೆ ಕಾಯಕಲ್ಪ

ಪ್ರಮುಖ ಮುಖ್ಯಾಂಶಗಳು

  • ಬಹುತೇಕ ಪಾಳು ಬಿದ್ದಿರುವ ಕೂರ್ಗ್ ವಿಲೇಜ್
  • ಕಾಯಕಲ್ಪ ನೀಡಲು ಮುಂದಾದ ತೋಟಗಾರಿಕೆ ಇಲಾಖೆ
  • ಆರ್ಟ್ ಗ್ಯಾಲರಿ ಮತ್ತಿತರ ಮಳಿಗೆಗಳ ಆರಂಭ
ಮಡಿಕೇರಿ:
ಕೊಡಗಿನ ಸಂಸ್ಕೃತಿ ಬಿಂಬಿಸುವ ಪಾರಂಪರಿಕ ಉತ್ಪಾದನೆಗಳು ಮತ್ತು ಸ್ಥಳೀಯ ಉತ್ಪನ್ನಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಪರಿಕಲ್ಪನೆಯಲ್ಲಿ ಆರಂಭವಾದ ಕೂರ್ಗ್ ವಿಲೇಜ್ ಸ್ಥಾಪನೆಯ ಉದ್ದೇಶ ಈಡೇರಿಕೆಗೆೆ ಕೊನೆಗೂ ಕಾಲ ಕೂಡಿ ಬಂದAತಿದೆ. ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟ್ ಪಕ್ಕದಲ್ಲೇ ಇರುವ ಈ ಸ್ಥಳದಲ್ಲಿ ಆರ್ಟ್ ಗ್ಯಾಲರಿ ಮತ್ತಿತರ ಮಳಿಗೆಗಳನ್ನು ಸ್ಥಾಪಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಈ ಮೂಲಕ ಮಡಿಕೇರಿಯಲ್ಲಿ ಮತ್ತೊಂದು ಪ್ರವಾಸಿ ಆಕರ್ಷಣೆಗೆ ಅವಕಾಶ ಮಾಡಿಕೊಟ್ಟಂತಾಗಿದೆ.
ಪ್ರವಾಸಿಗರಿಗೆ ಕೊಡಗಿನ ಸಂಸ್ಕೃತಿ, ಪದ್ಧತಿ, ಪರಂಪರೆ ತಿಳಿಸುವುದರ ಜತೆಗೆ ಇಲ್ಲಿಯ ಸಾಂಪ್ರದಾಯಿಕ ತಯಾರಿಕೆಗಳು, ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್‌ನಿಂದ ಸುಮಾರು 115 ಮೀ. ದೂರದಲ್ಲಿ ಕೂರ್ಗ್ ವಿಲೇಜ್ ನಿರ್ಮಿಸಲಾಗಿದೆ. 18 ಮಳಿಗೆಗಳನ್ನು ಒಳಗೊಂಡಿರುವ ಈ ಯೋಜನೆಯನ್ನು 2021ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ ಉದ್ಘಾಟನೆ ಮಾಡಿದ್ದರು.
ಮೊದಲು ತೋಟಗಾರಿಕೆ ಇಲಾಖೆಯ ನರ್ಸರಿ ಆಗಿದ್ದ ಈ ಜಾಗ ರಾಷ್ಟಿö್ರÃಯ ಸಂರಕ್ಷಿತ ಸ್ಮಾರಕವಾಗಿರುವ ರಾಜಾಸೀಟ್ ಪಕ್ಕದಲ್ಲೇ ಇರುವುದರಿಂದ ಇಲ್ಲಿ ಕೂರ್ಗ್ ವಿಲೇಜ್ ಕಾಮಗಾರಿಗೆ ಪ್ರಾಚ್ಯ ವಸ್ತು ಸಂರP್ಷÀಣಾ ಇಲಾಖೆ ಮತ್ತು ಸ್ಥಳಿಯ ಅನೇಕರ ವಿರೋಧದಂಥ ಸಾಕಷ್ಟು ಅಡೆ-ತಡೆಗಳು ಬಂದಿದ್ದವೂ. ಆದರೆ ಎಲ್ಲವನ್ನೂ ಎದುರಿಸಿ 98 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಕೂರ್ಗ್ ವಿಲೇಜ್ ಸದ್ಯಕ್ಕೆ ನಿರುಪಯೋಗಿ ಉಳಿದಿದೆ.
ಇಲ್ಲಿಯ ವಾತಾವರಣವೂ ಅತ್ಯಂತ ಸುಂದರವಾಗಿದ್ದು ಕೂರ್ಗ್ ವಿಲೇಜ್ ಒಳಗಿರುವ ಪುಟ್ಟ ಕೊಳ ಆಕರ್ಷಣಿಯವಾಗಿದೆ. ಭೂ ಪ್ರದೇಶ ಕೂಡ ಪ್ರವಾಸಿಗರನ್ನು ಸೆಳೆಯುವಂತಿದೆ. ಪ್ರಕೃತಿ ನಡುವೆ ನಡೆದಾಡಿಕೊಂಡು ಪ್ರವಾಸಿಗರಿಗೆ ಕೊಡಗು ಭೇಟಿಯ ನೆನಪು ಹಸಿರಾಗಿರುವಂತೆ ಶಾಪಿಂಗ್ ಮಾಡಲು ಬೇಕಾದ ಎಲ್ಲಾ ಅವಕಾಶಗಳು ಇಲ್ಲಿದೆ. ಸುಸಜ್ಜಿತ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಯಲಾಗಿದ್ದರೂ ಯಾವುದು ಕೂಡ ಸುದುಪಯೋಗ ಆಗದೇ ಪಾಳು ಬೀಳುವಂತಾಗಿದೆ.
ಜಿಲ್ಲೆಯ ಸ್ತಿçà ಶಕ್ತಿ ಸಂಘಗಳು, ತೋಟಗಾರಿಕೆ ಉತ್ಪನ್ನ ಕಂಪೆನಿಗಳು, ಏಲಕ್ಕಿ, ಜೇನು ಸೇರಿದಂತೆ ಕೊಡಗಿನ ಪಾರಂಪರಿಕ ಉತ್ಪನ್ನಗಳನ್ನು ಉತ್ಪಾದಿಸುವವರಿಗೆ ಸಂಬAಧಿಸಿದ ಸಹಕಾರ ಸಂಘಗಳಿಗೆ ಇಲ್ಲಿನ ಮಳಿಗೆಗಳನ್ನು ಈ ಮೊದಲು ಹಂಚಿಕೆ ಮಾಡಲಾಗಿತ್ತು. ಕೆಲವು ಮಳಿಗೆಗಳೂ ಇಲ್ಲಿ ಆರಂಭವಾಗಿದ್ದವು. ಆದರೆ ಸೂಕ್ತ ರೀತಿಯ ಪ್ರಚಾರದ ಕೊರತೆಯಿಂದ ರಾಜಾಸೀಟ್ ಪಕ್ಕದಲ್ಲೇ ಇರುವ ಈ ಪ್ರದೇಶಕ್ಕೆ ಪ್ರವಾಸಿಗರು ಸುಳಿಯುತ್ತಲೇ ಇರಲಿಲ್ಲ. ಹಾಗಾಗಿ ಮಳಿಗೆಗಳು ಒಂದೊAದಾಗಿ ಬಾಗಿಲು ಮುಚ್ಚಿದವು ಎನ್ನುತ್ತಾರೆ ಸ್ಥಳೀಯರು.
ಭಾರಿ ನಿರೀಕ್ಷೆಯೊಂದಿಗೆ ಕೂರ್ಗ್ ವಿಲೇಜ್ ಆರಂಭವಾಯಿತಾದರೂ ಇದರ ಸದುಪಯೋಗಪಡಿಸಿಕೊಳ್ಳುವಲ್ಲಿ ಸಂಬAಧಿಸಿದ ಅಧಿಕಾರಿಗಳು ವಿಫಲರಾಗಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದೆ. ಹಾಗಾಗಿಯೇ ಇದೊಂದು ನಿರರ್ಥಕ ಯೋಜನೆಯಂತೆ ಕಂಡು ಬರುತ್ತಿದೆ. ರಾಜಾಸೀಟ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರನ್ನು ಇತ್ತ ಸೆಳೆಯುವ ರೀತಿಯಲ್ಲಿ ಪ್ರಚಾರ ನಡೆಸಿದ್ದರೆ ಕೂರ್ಗ್ ವಿಲೇಜ್ ಜನಪ್ರಿಯವಾಗುವುದಕ್ಕೆ ಹೆಚ್ಚಿನ ಸಮಯ ಬೇಕಿರಲಿಲ್ಲ ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ.
ಪ್ರತಿವರ್ಷ ಜನವರಿಯಲ್ಲಿ ರಾಜಾಸೀಟ್‌ನಲ್ಲಿ ನಡೆಯುವ ಫಲ-ಪುಷ್ಪ ಪ್ರದರ್ಶನ ಸಂದರ್ಭ ಮಳಿಗೆಗಳನ್ನು ತೆರೆಯಲು ಇಲ್ಲಿ ಅವಕಾಶ ಮಾಡಿಕೊಟ್ಟಿದ್ದರೂ ಉತ್ತಮ ಪ್ರಚಾರ ಸಿಗುತ್ತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗುತ್ತಿತ್ತು ಎನ್ನುವುದು ಜನಸಾಮಾನ್ಯರ ಮಾತು. ಮಡಿಕೇರಿಯಲ್ಲಿ ಆಯೋಜಿಸಲಾಗುವ ಕಾಫಿ ಮೇಳ, ಜೇನು ಮೇಳ, ವೈನ್ ಮೇಳವನ್ನು ಕೂಡ ಇಲ್ಲಿಯೇ ನಡೆಸಬಹುದಾಗಿತ್ತು. ವಸ್ತು ಪ್ರದರ್ಶನ ಮಾದರಿಯ ಮೇಳಗಳನ್ನು ಆಯೋಜಿಸುವ ಮೂಲಕ ಪ್ರವಾಸಿಗರು ಮಾತ್ರವಲ್ಲದೆ ಸ್ಥಳೀಯರನ್ನೂ ಇತ್ತ ಕಡೆ ಆಕರ್ಷಿಸಬಹುದಾಗಿದೆ. ಈಗಲೂ ಅದಕ್ಕೆ ಅವಕಾಶಗಳು ಇದ್ದು, ಸದ್ಬಳಕೆ ಆಗಬೇಕಿದೆ ಅಷ್ಟೆ ಎಂದೂ ಕೂಡ ಸೇರಿಸುತ್ತಾರೆ.
ನಿರೀಕ್ಷೆಯಂತೆ ಕೂರ್ಗ್ ವಿಲೇಜ್‌ನಲ್ಲಿ ಜಿಲ್ಲೆಯ ಪಾರಂಪರಿಕ ಉತ್ಪಾದನೆಗಳು ಮತ್ತು ಸ್ಥಳೀಯ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರೆ ಜಿಲ್ಲೆಯಲ್ಲಿ ಅಲ್ಲಲ್ಲಿ ಅಣಬೆಗಳಂತೆ ಹುಟ್ಟಿಕೊಂಡಿರುವ ಸಾಂಬಾರ ಪದಾರ್ಥಗಳು, ಚಾಕೋಲೇಟ್, ವೈನ್ ಮಾರಾಟ ಮಾಡುವ ಬಹುತೇಕ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಹೊರ ಜಿಲ್ಲೆ, ಹೊರ ರಾಜ್ಯಗಳ ಉತ್ಪನ್ನಗಳು, ನಕಲಿ ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಬೀಳುತ್ತಿತ್ತು.
ಬಹುತೇಕ ಪಾಳು ಬಿದ್ದಿರುವ ಕೂರ್ಗ್ ವಿಲೇಜ್‌ಗೆ ಈಗ ಮತ್ತೆ ಕಾಯಕಲ್ಪ ಕೊಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಆರ್ಟ್ ಗ್ಯಾಲರಿ ಮತ್ತಿತರ ಮಳಿಗೆಗಳನ್ನು ಸ್ಥಾಪಿಸುವ ಸಂಬAಧ ಸಿದ್ಧತೆಗಳನ್ನು ನಡೆಸಿದೆ. ಈ ಬಗ್ಗೆ ಪ್ರವಾಸಿಗರು ಮತ್ತು ಸ್ಥಳೀಯರನ್ನು ಸೆಳೆಯಲು ಸರಿಯಾದ ರೀತಿಯಲ್ಲಿ ಪ್ರಚಾರ ನಡೆಸಿದರೆ ಇದು ಮಡಿಕೇರಿಯ ಮತ್ತೊಂದು ಪ್ರವಾಸಿ ಆಕರ್ಷನೆ ಆಗಲಿದೆ. ಇಲ್ಲದಿದ್ದರೆ ಸಂಪೂರ್ಣ ಯೋಜನೆಯೇ ಹಳ್ಳ ಹಿಡಿಯುವ ಸಾಧ್ಯತೆ ಬಗ್ಗೆ ಸಾರ್ವಜನಿಕರು ಕಾಳಜಿ ವ್ಯಕ್ತಪಡಿಸಿದ್ದಾರೆ.
"

ಕೋಟ್: 98 ಲಕ್ಷ ರೂ.ಗೂ ಅಧಿಕ ಮೊತ್ತ ಖರ್ಚು ಮಾಡಿ ಕೂರ್ಗ್ ವಿಲೇಜ್ ನಿರ್ಮಿಸಲಾಗಿದೆ. ಅಲ್ಲಿ ಮತ್ತೆ ವೆಚ್ಚ ಮಾಡುವುದಕ್ಕಿಂತ ರಾಜಾಸೀಟ್ ಅಭಿವೃದ್ಧಿ ಪಡಿಸುವುದು ಒಳಿತು. ಇದರಿಂದ ಈಗಿರುವ ಸ್ಥಳದಲ್ಲೇ ಪ್ರವಾಸಿ ಆಕರ್ಷಣೆ ಹೆಚ್ಚು ಮಾಡಬಹುದು. ಪ್ರವಾಸಿಗರಿಗೆ ಇಲ್ಲಿಯೇ ಹೆಚ್ಚಿನ ಸೌಲಭ್ಯ ಒದಗಿಸುವ ಮೂಲಕ ಗಮನ ಸೆಳೆಯುವಂತೆ ಮಾಡಬಹುದು.

ಕೂರ್ಗ್ ವಿಲೇಜ್‌ನಲ್ಲಿ ಇರುವ ಮಳಿಗೆಗಳನ್ನು ಬಾಡಿಗೆಗೆ ಕೊಡುವ ಸಂಬAಧ ಬಾಡಿಗೆ ನಿರ್ಧರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪಿಡ್ಲೂö್ಯಡಿ ಅಧಿಕಾರಿಗಳನ್ನು ಸಂಪರ್ಕಿಸಲಾಗಿದ್ದು ಸದ್ಯದಲ್ಲೇ ಬಾಡಿಗೆ ನಿರ್ಧಾರ ಆಗಲಿದೆ. ನಂತರ ಮಳಿಗೆಗಳ ಹಂಚಿ ಮಾಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಳಿಗೆಗಳನ್ನು ಹಂಚಿಕೆ ಮಾಡುವುದರ ಜತೆಗೆ ಹಿಂದಿನ ಅನುಭವಗಳ ಆಧಾರದಲ್ಲಿ ಕೂರ್ಗ್ ವಿಲೇಜ್ ಅನ್ನು ಪ್ರವಾಸಿ ಆಕರ್ಷಣೆ ಮಾಡುವ ನಿಟ್ಟಿನಲ್ಲೂ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆಹಾರ ಮಳಿಗೆಗಳ ಜತೆಗೆ ಕೊಡಗಿನ ಸಂಸ್ಕೃತಿ ಬಿಂಬಿಸುವ ಪಾರಂಪರಿಕ ಉತ್ಪಾದನೆಗಳು ಮತ್ತು ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಇಲ್ಲಿ ಆದ್ಯತೆ ಕೊಡಲಾಗುತ್ತಿದ್ದು ಕೂರ್ಗ್ ವಿಲೇಜ್ ಪರಿಕಲ್ಪನೆಗೆ ಅನುಗುಣವಾಗಿಯೇ ಎಲ್ಲವನ್ನೂ ಯೋಜಿಸಲಾಗುತ್ತಿದೆ.