ಗಾoಧಿ ಮೈದಾನದ ಒಳಗೆ ವಾಹನ ನಿಲುಗಡೆಗೆ ಕಡಿವಾಣ ಹಾಕುವ ಸಲುವಾಗಿ ಕಬ್ಬಿಣದ ಬೇಲಿ ಅಳವಡಿಸಲಾಯಿತು. ಕಲಾವತಿ, ಮಹೇಶ್ ಜೈನಿ ಇದ್ದರು. 
ಕೊಡಗು

ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆಗೆ ಕಡಿವಾಣ

ಪ್ರಮುಖ ಮುಖ್ಯಾಂಶಗಳು

  • ಭಾರಿ ವಾಹನ ನಿಲುಗಡೆಗೆ ಕಡಿವಾಣ
  • ಪರಿಸರ ಹಾಳಾಗುತ್ತಿದ್ದ ಹಿನ್ನೆಲೆಯಲ್ಲಿ ಕ್ರಮ
  • ಕಬ್ಬಿಣದ ಬೇಲಿ ಅಳವಡಿಸಿದ ನಗರಸಭೆ
ಮಡಿಕೇರಿ:
ನಗರದ ಗಾಂಧಿ ಮೈದಾನದ ಒಳಗೆ ವಾಹನ ನಿಲುಗಡೆಗೆ ನಗರಸಭೆ ವತಿಯಿಂದ ಕಡಿವಾಣ ಹಾಕಲಾಗಿದೆ. ಗಾಂಧಿ ಮೈದಾನದ ಒಳಗೆ ಭಾರಿ ವಾಹನ ಗಳನ್ನು ನಿಲ್ಲಿಸಿ ಅದೇ ಸ್ಥಳದಲ್ಲಿ ಅಡುಗೆ ಮಾಡಿ ವಾತಾವರಣವನ್ನು ಕಸದ ಕೊಂಪೆಯಾಗಿ ಮಾಡುತಿದ್ದ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ನಗರಸಭೆ ಅಧ್ಯಕ್ಷೆ ಕಲಾವತಿ ಮತ್ತು ಉಪಾಧ್ಯಕ್ಷ ಮಹೇಶ್ ಜೈನಿ ಮೇಲ್ವಿಚಾರಣೆಯಲ್ಲಿ ಇಲ್ಲಿ ಗುರುವಾರ ಕಬ್ಬಿಣದ ಬೇಲಿ ಅಳವಡಿಸಲಾಗಿದೆ. ದಸರಾ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಈ ಕಬ್ಬಿಣದ ಬೇಲಿಯನ್ನು ತೆರವುಗೊಳಿಸಿ ನಂತರ ಮತ್ತೆ ಅಳವಡಿಸುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಈ ವ್ಯಾಪ್ತಿಯ ಶಾಲಾ ಮಕ್ಕಳಿಗೂ ಪ್ರಯೋಜನ ಆಗಲಿದೆ ಎಂದು ಮಹೇಶ್ ಜೈನಿ ತಿಳಿಸಿದ್ದಾರೆ.