ಸೋಮವಾರಪೇಟೆ ತಾಲೂಕಿನ ಹೆಗ್ಗುಳ ಗ್ರಾಮದಲ್ಲಿನ ಶ್ರೀ ಲಕ್ಷ್ಮೀ ಚನ್ನಿಗರಾಯ ಮತ್ತು ಜೋಡಿ ಹನುಮಂತ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಮರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಹಿಳೆಯರು ಕಳಸ ಮೆರವಣಿಗೆ ನಡೆಸಿದರು. 
ಕೊಡಗು

ಶ್ರೀ ಲಕ್ಷ್ಮೀ ಚನ್ನಿಗರಾಯ ಸನ್ನಿಧಿಯಲ್ಲಿ ಧಾರ್ಮಿಕ ವೈಭವ

ಸೋಮವಾರಪೇಟೆ: ತಾಲೂಕಿನ ಹೆಗ್ಗುಳ ಗ್ರಾಮದಲ್ಲಿನ ಶ್ರೀ ಲಕ್ಷ್ಮೀ ಚನ್ನಿಗರಾಯ ಮತ್ತು ಜೋಡಿ ಹನುಮಂತ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಮರು ಪ್ರತಿಷ್ಠಾಪನಾ ಕಾರ್ಯಕ್ರಮ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಮೇ 5ರಂದು ರಾತ್ರಿ 7ರಿಂದ ವಾಸ್ತು ಹೋಮ ಹಾಗೂ ವಿಶೇಷ ಪೂಜೆಗಳು ನಡೆಯಿತು. ಮೇ 6ರಂದು ಬೆಳಗ್ಗೆ 7ಕ್ಕೆ ಗಂಗಾಪೂಜೆ ಮತ್ತು ಕಳಸ ಪ್ರತಿಷ್ಠಾಪನೆ ಮತ್ತು ಆಂಜನೇಯ ಹೋಮ, ವಿಶೇಷ ಪೂಜೆಗಳು ನಡೆದವು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಅರ್ಚಕ ಉಚ್ಚಂಗಿ ಶೇಷಾಚಲ ಅವರ ನೇತೃತ್ವದಲ್ಲಿ ಪೂಜೆಗಳು ನಡೆದವು. ದೇವಾಲಯ ಸಮಿತಿ ಅಧ್ಯಕ್ಷ ವಸಂತ, ಉಪಾಧ್ಯಕ್ಷ ಎಚ್.ಕೆ.ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಚ್.ಎಂ.ನಿಶ್ಚಿತ್, ಪದಾಧಿಕಾರಿ ಎಚ್.ಎಸ್.ಚೇತನ್‌ಕುಮಾರ್, ಎಚ್.ಎಂ.ಸಂಜು ಇದ್ದರು.