ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಚೇರಂಬಾಣೆಯ ಬೇಂಗ್‌ನಾಡ್ ಕೊಡವ ಸಮಾಜದಲ್ಲಿ ಆರಂಭಿಸಿದ 10ನೇ ಕೊಡವ ಪುಸ್ತಕ ಪತ್ತಾಯವನ್ನು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಉದ್ಘಾಟಿಸಿದರು. ಅಯ್ಯಂಡ ರಾಮಕೃಷ್ಣ, ಬಾಚರಣಿಯಂಡ ದಿನೇಶ್ ಗಣಪತಿ, ಬಡ್ಡಿರ ನಳಿನಿ, ನಾಪಂಡ ಸಿ. ಗಣೇಶ್, ಕಂಬೆಯAಡ ಡೀನಾ ಬೋಜಣ್ಣ ಮತ್ತಿತರರು ಇದ್ದರು.
ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ಸುಖ-ಶಾಂತಿ, ನೆಮ್ಮದಿ ಪ್ರಾಪ್ತಿಯಾಗುವುದರೊಂದಿಗೆ ಮನೆಯ ವಾತಾವರಣ ಬೆಳಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು. ಚೇರಂಬಾಣೆಯ ಬೇಂಗ್‌ನಾಡ್ ಕೊಡವ ಸಮಾಜದಲ್ಲಿ ಶನಿವಾರ ಆಯೋಜಿಸಿದ್ದ 10ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟಿಸಿ ಮಾತನಾಡಿದರು.
ಪುಸ್ತಕ ಎಂಬುದು ಜ್ಞಾನದ ದೀವಿಗೆಯಿದ್ದಂತೆ. ಇದರಿಂದ ಓದುಗರ ಜ್ಞಾನ ವೃದ್ಧಿಸುವುದು. ಕೊಡವರ ವಿಚಾರವಾಗಿ ಕಾವೇರಿ ಪುರಾಣ, ಸ್ಕಂದ ಪುರಾಣಗಳಲ್ಲಿ ಉಲ್ಲೇಖವಿದ್ದು, 2ನೇ ಶತಮಾನದ ತಮಿಳು ಸಂಗA ಸಾಹಿತ್ಯದಲ್ಲಿಯೂ ಉಲ್ಲೇಖಿಸಲಾಗಿದೆ. ಇಂತಹ ಜನಾಂಗದ ಸಾಹಿತ್ಯ, ಸಂಸ್ಕೃತಿಯ ವಿಚಾರವಾಗಿ ಪ್ರತಿಯೊಬ್ಬರೂ ಅರಿತಿರಬೇಕು. ಮಕ್ಕಳನ್ನು ಕೊಡವಾಮೆಯ ಪಥದಲ್ಲಿ ಬೆಳೆಸುವುದು ಒಂದು ಕರ್ತವ್ಯ ಅಥವಾ ಜವಾಬ್ದಾರಿಯಾಗಿಬಾರದು, ಇದೊಂದು ಜೀವನ ಕ್ರಮವಾಗಿರಬೇಕು.
ಬಾಲ್ಯದಲ್ಲಿಯೇ ಬಾಳೋಪಾಟ್, ಕೊಡಗಿನ ಚರಿತ್ರೆ, ಪೂರ್ವಜರ ಸಾಧನೆಗಳು ಹಾಗೂ ಸಂಸ್ಕೃತಿಯ ಬಗ್ಗೆ ಅರಿತಿದ್ದರೆ ಭವಿಷ್ಯದಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ದಕ್ಷತೆಯ ಬದುಕು ರೂಪುಗೊಳ್ಳಲು ಕಾರಣವಾಗುವುದು. ಕೊಡಗಿನ ಪೌರಾಣಿಕ, ಐತಿಹಾಸಿಕ ಹಿನ್ನೆಲೆಯೇ ಕೊಡವ ಜನಾಂಗದ ಭಾಷೆ, ಸಂಸ್ಕೃತಿಯಿAದ ಬೆಳೆದುಬಂದಿದ್ದು, ಇಂತಹ ಭಾಷೆ ಹಾಗೂ ಸಾಹಿತ್ಯದ ಮಹತ್ವವನ್ನು ಹೊರಜಗತ್ತಿಗೆ ತೋರಿಸಿಕೊಟ್ಟ ಮಹನೀಯರಲ್ಲಿ ಬ್ರಿಟಿಷ್ ವಿದ್ವಾಂಶ ಬಿ.ಎಲ್.ರೈಸ್, ಜರ್ಮನ್ ಪಾದ್ರಿ ಮೋಗ್ಲಿಂಗ್, ರಾಬರ್ಟ್ ಕಾಲ್ಡ್ವೆಲ್ ಮುಂತಾದವರು ಮುಂಚೀಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂತೆಯೇ ಕೊಡವ ಭಾಷೆಯ ವಿಶೇಷತೆಯನ್ನು ಮನಗಂಡು ಹಲವಾರು ಸಂಶೋಧಕರು, ಸಾಹಿತಿಗಳು ಕನ್ನಡ, ಆಂಗ್ಲ ಭಾಷೆಯಲ್ಲಿ ಬರೆದಿರುವ ಕೃತಿಗಳು ಪ್ರತಿಯೊಬ್ಬರ ಮನೆಮನೆಗಳಲ್ಲಿ ಇರುವಂತಾಗಬೇಕಿದೆ. ಕೊಡವ ಪುಸ್ತಕ ಪತ್ತಾಯದಲ್ಲಿ ಇವೆಲ್ಲದರ ಲಭ್ಯತೆಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಅಯ್ಯಂಡ ರಾಮಕೃಷ್ಣ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪತ್ತಾಯ ಕೇವಲ ಪುಸ್ತಕಗಳ ಭಂಡಾರವಲ್ಲ, ಇದೊಂದು ಜ್ಞಾನ ಭಂಡಾರ. ಸರಸ್ವತಿಯು ನೆಲೆಸುವ ಸ್ಥಳ. ಕೊಡಗಿನ ಕೃಷಿಗೆ ಸಂಬAಧಿಸಿದAತೆ ಪತ್ತಾಯವನ್ನು ಭತ್ತದ ದಾಸ್ತಾನಿರಿಸಲು ಬಳಸಲಾಗುತ್ತಿತ್ತು. ಇಂತಹ ಪತ್ತಾಯದಲ್ಲಿ ಭತ್ತವು ಖಾಲಿಯಾಗುತ್ತಿದ್ದರೂ ಪತ್ತಾಯ ಖಾಲಿ ಆಗದಂತೆ ನೋಡಿಕೊಳ್ಳುತ್ತಿದ್ದರು. ಅದು ಧಾನ್ಯಲಕ್ಷಿö್ಮÃ ಯ ತಾಣವಾಗಿತ್ತು. ಅದರಂತೆ ಅಕಾಡೆಮಿಯ ಪತ್ತಾಯವು ಸರಸ್ವತಿ ನೆಲೆಸಿರುವ ತಾಣವಾಗಿದೆ ಎಂದು ಹೇಳಿದರು.
ಬೇಂಗ್‌ನಾಡ್ ಕೊಡವ ಸಮಾಜ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ ಮಾತನಾಡಿ ಕೊಡವ ಸಾಹಿತ್ಯ ಅಕಾಡೆಮಿಯಿಂದ ಸರಾಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳು ಸಮಾಜಮುಖಿಯಾಗಿದ್ದು, ಪುಸ್ತಕ ಪತ್ತಾಯ ಅಗ್ರಸ್ಥಾನದ್ದಾಗಿದೆ. ಬೇಂಗ್‌ನಾಡ್ ಕೊಡವ ಸಮಾಜದಲ್ಲಿ ಸ್ಥಾಪಿಸಿರುವ ಪುಸ್ತಕ ಪತ್ತಾಯದ ಪ್ರಯೋಜನವನ್ನು ಈ ನಾಡಿನ ಜನತೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯತೆಯೊಂದಿಗೆ ನಾಳಿನ ಒಳ್ಳೆಯ ಭವಿಷ್ಯಕ್ಕೆ ನಾಂದಿಯಾಗಿದೆ. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆಗೆ ಸಾಹಿತ್ಯದ ಜ್ಞಾನ ಅವಶ್ಯವಿದ್ದು, ಉತ್ತಮ ಸಮಾಜ ನಿರ್ಮಾಣವನ್ನು ಇಂತಹ ಯೋಜನೆಯಿಂದ ಕಾಣಲು ಸಾಧ್ಯ ಎಂದರು.
ನಿವೃತ್ತ ಶಿಕ್ಷಕಿ ಬಡ್ಡಿರ ನಳಿನಿ ಪೂವಯ್ಯ ಮಾತನಾಡಿದರು.
ಅಕಾಡೆಮಿ ಸದಸ್ಯ ನಾಪಂಡ ಸಿ. ಗಣೇಶ್, ಕಂಬೆಯAಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ಕುಡಿಯರ ಎಂ. ಕಾವೇರಪ್ಪ, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ಬೇಂಗ್‌ನಾಡ್ ತಕ್ಕರಾದ ತೇಲಪಂಡ ನಂದ, ಸಮಾಜ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಪೊಮ್ಮಕ್ಕಡ ಕೂಟದ ಸದಸ್ಯೆಯರು ಇದ್ದರು.
ಇದೇ ವೇಳೆ ನಾಪಂಡ, ಚೀಯಬೆರ, ಕೊಟ್ಟ್ಕತ್ತಿರ, ಮಣವಟ್ಟಿರ, ತೇಲಪಂಡ ಕುಟುಂಬಗಳಿಗೆ ದುಡಿಗಳನ್ನು ವಿತರಿಸಲಾಯಿತು. ಕೊಡವ ಪುಸ್ತಕ ಪತ್ತಾಯ ಸ್ಥಾಪನೆಯ ಪ್ರಯುಕ್ತ ಹತ್ತು ಸಾವಿರ ರೂ. ಮೊತ್ತದ ಚೆಕ್ಕ ಅನ್ನು ಅಕಾಡೆಮಿ ಅಧ್ಯಕ್ಷರಿಗೆ ನೀಡಿದ ಮೇರೆಗೆ ಪತ್ತಾಯದ ನೋಂದಣಿ ಪತ್ರವನ್ನು ಬೇಂಗ್‌ನಾಡ್ ಕೊಡವ ಸಮಾಜ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.